»   » ಸಿನಿಮಾದಲ್ಲಿ ಅಭಿನಯಿಸಬೇಕಾ? ಇಲ್ಲೊಂದು ಅವಕಾಶ!

ಸಿನಿಮಾದಲ್ಲಿ ಅಭಿನಯಿಸಬೇಕಾ? ಇಲ್ಲೊಂದು ಅವಕಾಶ!

Subscribe to Filmibeat Kannada


ಬೆಂಗಳೂರು, ಆಗಸ್ಟ್ 16 : ಸಿನಿಮಾ ನಟಿಯಾಗಬೇಕೆಂಬ ಆಸೆಯುಳ್ಳ ಹುಡುಗಿಯರಿಗೆ ಇಲ್ಲೊಂದು ಅವಕಾಶ.

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಕವಿತಾ ಲಂಕೇಶ್ , ತಮ್ಮ ಹೊಸ ಚಿತ್ರಕ್ಕಾಗಿ ಪ್ರತಿಭಾನ್ವೇಷಣೆ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರಲೋಕ.ಕಾಂ ಸಹಕಾರ ನೀಡುತ್ತಿದೆ.

ಪಿ.ಲಂಕೇಶ್ ಅವರ ಮುಸ್ಸಂಜೆಯ ಕಥಾ ಪ್ರಸಂಗ ಕೃತಿ, ಅವ್ವ ಹೆಸರಿನಲ್ಲಿ ಚಲನಚಿತ್ರವಾಗಲಿದ್ದು, ಈ ಚಿತ್ರಕ್ಕಾಗಿ 19ವರ್ಷದ ಸುಂದರ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕನ್ನಡತಿಗೆ ಹೆಚ್ಚಿನ ಆಧ್ಯತೆ.

ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ಸಂಪರ್ಕ ಸಂಖ್ಯೆಯನ್ನು ಚಿತ್ರಲೋಕ.ಕಾಂನ ವೀರೇಶ್ ಅವರಿಗೆ ತಲುಪಿಸಬೇಕೆಂದು ಪ್ರಕಟಣೆ ಕೋರಿದೆ.

ವೀರೇಶ್ ಅವರ ಇಮೇಲ್ ವಿಳಾಸ : kmveeresh@chitraloka.com

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada