»   » ಮಿಲನಬಿಡುಗಡೆ ಸಮಾರಂಭದಲ್ಲಿ ರಾಘಣ್ಣನ ಹುಟ್ಟುಹಬ್ಬ

ಮಿಲನಬಿಡುಗಡೆ ಸಮಾರಂಭದಲ್ಲಿ ರಾಘಣ್ಣನ ಹುಟ್ಟುಹಬ್ಬ

Posted By:
Subscribe to Filmibeat Kannada


ಅರಸುಗೆಲುವು ಪುನೀತ್ ಬಳಗಕ್ಕೆ ಸಮಾಧಾನ ತಂದಿಲ್ಲ. ಪಾರ್ವತಿ ಮೆಲ್ಟನ್ ನಾಯಕಿಯಾಗಿ ಅಭಿನಯಿಸಿರುವ ಹೊಸ ಚಿತ್ರ ಮಿಲನಬಗ್ಗೆ ಈಗ ಹೆಚ್ಚಿನ ನಿರೀಕ್ಷೆ. ಈ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭ ನಗರದಲ್ಲಿ ನಡೆಯಿತು.

ಆನಂದ್ ಆಡಿಯೋ ಕ್ಯಾಸೆಟ್ ಹೊರತಂದಿದ್ದು, ಸಮಾರಂಭದಲ್ಲಿ ಪುನೀತ್ ಮತ್ತು ಶಿವರಾಜ್ ಕುಮಾರ್ ಹಾಜರಿದ್ದರು. ಈ ಸಂದರ್ಭದಲ್ಲಿಯೇ ರಾಘವೇಂದ್ರ ರಾಜ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ದುಶ್ಯಂತ್ ನಿರ್ಮಾಣದ ಈ ಚಿತ್ರವನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ. ಮುಂಗಾರು ಮಳೆ ಚಿತ್ರಕ್ಕೆ ಇಂಪಿನ ಸಂಗೀತ ನೀಡಿದ ಮಾನೋಮೂರ್ತಿ, ಮಿಲನಕ್ಕೂ ಇಂಪಿನ ಸಂಗೀತ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada