»   » ಮುಟ್ಟಿದ್ದೆಲ್ಲ ಚಿನ್ನ : ಜೇಮ್ಸ್ ಬಾಂಡ್ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ!

ಮುಟ್ಟಿದ್ದೆಲ್ಲ ಚಿನ್ನ : ಜೇಮ್ಸ್ ಬಾಂಡ್ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ!

Subscribe to Filmibeat Kannada


ಲಂಡನ್, ಆಗಸ್ಟ್ 16 : ಕರ್ನಾಟಕದ ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಿಂಚುವ ದಿನಗಳು ಹತ್ತಿರದಲ್ಲಿಯೇ ಇವೆ. ಬಿಗ್ ಬ್ರದರ್ ಕಾರ್ಯಕ್ರಮ ಆಕೆಯ ತಾರಾ ಮೌಲ್ಯ ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಬಾಲಿವುಡ್ ನಲ್ಲಿ ಶಿಲ್ಪಾ ಮೌಲ್ಯ ಕಡಿಮೆಯಾಯಿತು ಅನ್ನುವಾಗಲೇ, ಶುಕ್ರದೆಸೆ ತಿರುಗಿದೆ. ಬಯಸಿದ್ದೆಲ್ಲ ಬಾಗಿಲಿಗೆ ಬರುತ್ತಿದೆ. ಈಗ ಹಾಲಿವುಡ್ ನತ್ತ ಅವರ ಚಿತ್ತ ಹೊರಳಿದೆ. ಈ ಮಧ್ಯೆ ಜೇಮ್ಸ್ ಬಾಂಡ್ ಚಿತ್ರದಲ್ಲಿ ನಟಿಸಲು ಶಿಲ್ಪಾ ಶೆಟ್ಟಿಗೆ ಆಹ್ವಾನ ಬಂದಿದೆ.

ಜೇಮ್ಸ್ ಬಾಂಡ್ ಸರಣಿಯ 23ನೇ ಚಿತ್ರಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಏಷ್ಯಾದಲ್ಲಿ ಚಿತ್ರವನ್ನು ಜನಪ್ರಿಯವಾಗಿಸಲು ಶಿಲ್ಪಾ ಶೆಟ್ಟಿ ಅವರನ್ನು ಬಳಿಸಿಕೊಳ್ಳಲು ನಿರ್ಮಾಪಕರು ಲೆಕ್ಕಾಚಾರ ಹಾಕಿದ್ದಾರೆ. ಜೇಮ್ಸ್ ಬಾಂಡ್ ಪಾತ್ರಧಾರಿ ಡೇನಿಯಲ್ ಕ್ರೇಗ್ ಅವರಿಗೆ ಶಿಲ್ಪಾ ಒಳ್ಳೆ ಜೋಡಿ ಎಂಬುದು ನಿರ್ಮಾಪಕರ ಅಭಿಪ್ರಾಯ.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada