»   » ರಾಜ್‌ ಆಪ್ತ ವಿಕ್ರಂ ಶ್ರೀನಿವಾಸ್‌ ನಿಧನ

ರಾಜ್‌ ಆಪ್ತ ವಿಕ್ರಂ ಶ್ರೀನಿವಾಸ್‌ ನಿಧನ

Subscribe to Filmibeat Kannada

ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ಕುಟುಂಬದ ಆಪ್ತ ಹಾಗೂ ಹಿರಿಯ ಚಿತ್ರ ನಿರ್ಮಾಪಕ ವಿಕ್ರಂ ಶ್ರೀನಿವಾಸ್‌ ಸೋಮವಾರ (ಸೆ.15) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು .

ಅಸ್ವಸ್ಥತೆಯಿಂದ ನರಳುತ್ತಿದ್ದ ವಿಕ್ರಂ ಶ್ರೀನಿವಾಸ್‌ ಸೋಮವಾರ ಚೆನ್ನೈನ ಆಸ್ಪತ್ರೆಯಾಂದರಲ್ಲಿ ಕೊನೆಯುಸಿರೆಳೆದರು. ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ವಿಕ್ರಂ ಶ್ರೀನಿವಾಸ್‌ ಅಗಲಿದ್ದಾರೆ. ವಿಕ್ರಂ ಅವರ ಅಂತಿಮ ದರ್ಶನಕ್ಕೋಸುಗ ಡಾ.ರಾಜ್‌ ಸೋಮವಾರ ಸಂಜೆ ಚೆನ್ನೈಗೆ ತೆರಳಿದರು.

ರೇವತಿ ಸ್ಟುಡಿಯಾದಲ್ಲಿ ಮೇನೇಜರ್‌ ಆಗಿ ವೃತ್ತಿ ಜೀವನ ಆರಂಭಿಸಿದ ವಿಕ್ರಂ ಶ್ರೀನಿವಾಸ್‌- 1953ರಿಂದ 1971ರ ಅವಧಿಯಲ್ಲಿ ಬಿ.ಎಸ್‌.ರಂಗಾ ಅವರ ಗರಡಿಯಲ್ಲಿ ವೃತ್ತಿಯ ಒಳ ಮರ್ಮಗಳನ್ನು ಅರಿತು ಪಳಗಿದರು. 1966ರಲ್ಲಿ ವಿಕ್ರಂ ನಿರ್ಮಿಸಿದ ‘ಬಾಲ ನಾಗಮ್ಮ’ ಚಿತ್ರ ಹೆಂಗಳೆಯರ ಮನ ಗೆದ್ದಿತ್ತು .

ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ‘ಬಂಗಾರದ ಮನುಷ್ಯ, ಹುಲಿ ಹಾಲಿನ ಮೇವು, ನಂದ ಗೋಕುಲ, ದಾರಿ ತಪ್ಪಿದ ಮಗ, ಬಭ್ರುವಾಹನ’ ಮುಂತಾದ ಅತ್ಯುತ್ತಮ ಚಿತ್ರಗಳ ನಿರ್ಮಾಣದಲ್ಲಿ ವಿಕ್ರಂ ಶ್ರೀನಿವಾಸ್‌ ಅವರ ಪಾಲಿತ್ತು . ‘ದೂರದ ಬೆಟ್ಟ , ಸನಾದಿ ಅಪ್ಪಣ್ಣ , ಕವಿರತ್ನ ಕಾಳಿದಾಸ’ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ವಿಕ್ರಂ ಶ್ರೀನಿವಾಸ್‌- ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲೊಂದಾಗಿರುವ ‘ಶಂಕರ್‌ಗುರು’ ಚಿತ್ರದ ಸಹ ನಿರ್ಮಾಪಕರು.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada