»   » ಸದ್ಯಕ್ಕೆ ಪ್ರತಿಷ್ಠಾಪಿತವಾಗಿರುವ ಹೊಸ ಹೆಣ್ಣು ಮೂರ್ತಿ ಸಿಮ್ರಾನ್‌ !

ಸದ್ಯಕ್ಕೆ ಪ್ರತಿಷ್ಠಾಪಿತವಾಗಿರುವ ಹೊಸ ಹೆಣ್ಣು ಮೂರ್ತಿ ಸಿಮ್ರಾನ್‌ !

Posted By: Staff
Subscribe to Filmibeat Kannada

ಚೆನ್ನೈನಲ್ಲಿ ದೇವಸ್ಥಾನ ಕಟ್ಟಿಸುವಂಥಾ ಅಭಿಮಾನಿ ವೃಂದ ಪಡೆದ ನಟಿಯರೆಲ್ಲರಲ್ಲಿ ಒಂದು ಸಾಮ್ಯತೆ ಇದೆ. ಅದೇನೆಂದರೆ- ಎಲ್ಲರೂ ಬಾಲಿವುಡ್‌ನಲ್ಲಿ ಮೊದಲು ನಸೀಬು ನೋಡಿ, ಗಿಟ್ಟದೆ ತಮಿಳು ಚಿತ್ರರಂಗದಲ್ಲಿ ಮಿಂಚಿದವರು. ಜೊತೆಗೆ ಎಲ್ಲರೂ ಬಿಚ್ಚಮ್ಮರು.

ದಕ್ಷಿಣ ಭಾರತದ ಬಹು ಭಾಷೆಗಳಲ್ಲಿ ನಟಿಸಿದರೂ ಖುಷ್‌ಬೂ ಅಭಿಮಾನಿಗಳ ಬಳಗ ಹುಟ್ಟಿದ್ದು ಚೆನ್ನೈನಲ್ಲಿ. ನಗ್ಮಾ ಕೂಡ ಎಲ್ಲೆಲ್ಲೋ ಭವಿತವ್ಯ ಕಂಡುಕೊಳ್ಳಲು ಯತ್ನಿಸಿದರೂ ಅವಳನ್ನು ಆರಾಧಿಸಿದ್ದು ತಮಿಳರೇ. ಈ ಇಬ್ಬರಿಗೂ ದೇವಸ್ಥಾನ ಕಟ್ಟಿದ ಅಭಿಮಾನಿಗಳೆಲ್ಲಾ ಇದೀಗ ತಮ್ಮ ಅಭಿಮಾನಿ ಬಳಗದ ಫಲಕ ಬದಲಿಸಿ, ಸಿಮ್ರಾನ್‌ ಹೆಸರನ್ನು ಜೋಡಿಸಿಕೊಂಡಿದ್ದಾರೆ. ಆಫ್‌ಕೋರ್ಸ್‌, ಈಕೆಗೂ ಒಂದು ದೇವಸ್ಥಾನವನ್ನು ಕಟ್ಟಿ, ನಿತ್ಯಪೂಜೆ ಶುರುವಿಟ್ಟುಕೊಂಡಿದ್ದಾರೆ !

ಇವತ್ತಿಗೂ ಯಶಸ್ವಿ ಚಿತ್ರಗಳನ್ನು ಕೊಡುತ್ತಾ, ನಟನೆಯಲ್ಲಿ ಪಳಗಿರುವ ಸಿಮ್ರಾನ್‌ ನಗುತ್ತಿದ್ದರೆ, ತನಗಿಂತ ಈಕೆ ಹೇಗೆ ಮುಂದೆ ಹೋದಳು ಅಂತ 'ನಾಗರಹಾವು" ಕುಖ್ಯಾತಿಯ ಜ್ಯೋತಿಕಾ ಕರುಬುತ್ತಿದ್ದಾಳಂತೆ. ಅಂದಹಾಗೆ, ದೇವಸ್ಥಾನಕ್ಕೆ ಮೊದಲ ಭಕ್ತನಾಗಿ ಕಮಲ ಹಾಸನ್‌ಗೇ ಅಭಿಮಾನಿಗಳು ಬುಲಾವು ಕೊಟ್ಟಿದ್ದರಂತೆ. ಅದನ್ನು ಕೇಳಿ ಸಿಮ್ರಾನ್‌ ಕೆನ್ನೆ ಕೆಂಪಾಗಿದ್ದು ದಿಟವಂತೆ !

English summary
Temple for favorite star : Now its Simrans turn in Chennai
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada