»   » ವಿಜಯ ರಾಘವೇಂದ್ರ ಖುಷಿ ಖುಷಿ !

ವಿಜಯ ರಾಘವೇಂದ್ರ ಖುಷಿ ಖುಷಿ !

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ಇತ್ತೀಚೆಗೆ ಯಾವ ಸಿನೆಮಾ ನೋಡಿದೆ ಅಂತ ಕುಶಲ ಮಾತುಕತೆಯ ನಡುವೆ ಪ್ರಶ್ನೆ ಹಾಕುವುದುಂಟು. ಬೂಮ್‌, ಭಗ್‌ಬಾನ್‌, ಮುಂಬಯಿ ಮ್ಯಾಟ್ನೀ... ಹೋಗಲಿ ಹಳೇ ಪಥೇರ್‌ ಪಾಂಚಾಲಿ ಎಂದರೂ ನಡೆಯುತ್ತದೆ. ಆದರೆ ಕನ್ನಡ ಸಿನೆಮಾದ ಹೆಸರು ಹೇಳಿದರೆ ಪ್ರಶೆ ್ನಕೇಳಿದವರ ಹುಬ್ಬು ಫೀಟುಗಟ್ಟಲೆ ಮೇಲೇರುತ್ತದೆ ! ನೀನು ಕನ್ನಡ ಫಿಲ್ಮ್‌ ನೋಡ್ತೀಯಾ...? ಅಂತ ಮತ್ತೆ ಪ್ರಶ್ನೆ ಕೇಳುತ್ತಾರೆ. ಈ ಟ್ರೆಂಡು ಬೆಂಗಳೂರಿನಂತಹ ಸಿಟಿಗಳಲ್ಲಿ ಇನ್ನೂ ಹೆಚ್ಚು. ಆದರೆ ಕನ್ನಡ ಸಿನೆಮಾದಲ್ಲಿ ಬರುತ್ತಿರುವ ಇತ್ತೀಚೆಗಿನ ಸಿನೆಮಾಗಳು ಹಾಗಿಲ್ಲ. ಅವು ಹೊಸ ವೀಕ್ಷಕರನ್ನು ಸೃಷ್ಟಿಸಿವೆ ಎಂಬ ಅಭಿಪ್ರಾಯ ನಾಯಕ ನಟ ವಿಜಯ ರಾಘವೇಂದ್ರ ಅವರದ್ದು. ಸಿನೆಮಾ ಕತೆಯಲ್ಲಿ ನೈಜತೆ ಇದ್ದರಷ್ಟೇ ಅದು ವೀಕ್ಷಕರ ಮನ ಮುಟ್ಟಲು ಸಾಧ್ಯವಾಗುವುದು.

ವಿಜಯ ರಾಘವೇಂದ್ರ ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದವರು. ರಾಷ್ಟ್ರಪ್ರಶಸ್ತಿಗಳನ್ನು ಗೆದ್ದವರು. ಈಗ ನಾಯಕ ನಟನ ಪಟ್ಟ. ಕಳೆದೆರಡು ವರ್ಷಗಳಿಂದಷ್ಟೇ ಬೆಳ್ಳಿ ತೆರೆಯಲ್ಲಿ ನಾಯಕ ನಟನ ಪಾತ್ರ ಮಾಡುತ್ತಿರುವ ವಿಜಯ್‌ ರಾಘವೇಂದ್ರ ಈ ಅವಧಿಯಲ್ಲಿ ಸುಮಾರು 9 ಸಿನೆಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಸ್ವಲ್ಪ ಸಮಯ ರಿಲ್ಯಾಕ್ಸ್‌ !

ಫಾರ್ಮ್ಯುಲಾ ಚಿತ್ರ ಕತೆಗಳೆಂದರೆ ವಿಜಯ್‌ಗೆ ಬೋರ್‌. ಲವ್‌ ಸ್ಟೋರಿ ಎಂದರೆ ಹುಡುಗ ಹುಡುಗಿ ಆ್ಯಕ್ಸಿಡೆಂಟ್‌ ಅಥವಾ ಜಗಳವೊಂದರಲ್ಲಿ ಭೇಟಿಯಾಗುತ್ತಾರೆ. ಪರಸ್ಪರ ದ್ವೇಷಿಸುತ್ತಾರೆ. ನಂತರ ದ್ವೇಷ ಪ್ರೀತಿಗೆ ತಿರುಗುತ್ತದೆ. ಹೀಗೆ ಮಾಮೂಲಿ ಜಗಳ, ಮದುವೆಗೆ ಹೋರಾಟ- ಕಟ್ಟಕಡೆಗೆ ಮದುವೆಯಾಂದಿಗೆ ಸಿನೆಮಾಕ್ಕೆ ‘ಶುಭಂ’. ಪ್ರೇಕ್ಷಕರೂ ಕೂಡ ಇಂಥ ಮಾಮೂಲಿ ಕಥೆಗೆ ಒಗ್ಗಿ ಹೋಗಿದ್ದಾರೆ. ಇದರಿಂದ ನಿರ್ಮಾಪಕರು ಹೊಸ ನಮೂನೆಯ ಕಥೆಯ ಸಿನೆಮಾಕ್ಕೆ ದುಡ್ಡು ಹಾಕಲು ಹೆದರುತ್ತಾರೆ ಎಂದು ವಿಜಯ್‌ ರಾಘವೇಂದ್ರ ಬೇಜಾರು ಮಾಡಿಕೊಳ್ಳುತ್ತಾರೆ.

ವಿಜಯ್‌ ನಟಿಸಿರುವ ಹೊಸ ಚಿತ್ರ ಖುಷಿ ಈಗ ಬಿಡುಗಡೆಯಾಗಿದೆ. ಹುಡುಗರಿಗೆ ಹುಡುಗಿಯರಿಗೆ ಖುಷಿ ಇಷ್ಟವಾಗಿದೆ. ಈ ಯಶಸ್ಸು ವಿಜಯ್‌ಗೂ ಖುಷಿ ತಂದಿದೆ. ಇಂಥದೊಂದು ಯಶಸ್ಸು ಅವರಿಗೀಗ ತೀರಾ ಅಗತ್ಯವಾಗಿತ್ತು .

ಅಂದಹಾಗೆ, ಸ್ವಲ್ಪ ಸಮಯ ಸಿನೆಮಾ ಶೆಡ್ಯೂಲ್‌ನಿಂದ ಬ್ರೇಕ್‌ ತೆಗೆದುಕೊಳ್ಳುವುದು ವಿಜಯ್‌ ಅವರ ಮುಂದಿನ ಪ್ಲಾನ್‌.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada