»   » ಮಾ.ಮಂಜುನಾಥ್‌ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌?

ಮಾ.ಮಂಜುನಾಥ್‌ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌?

Subscribe to Filmibeat Kannada


ಮಂಜುನಾಥ್‌ ನಿರ್ದೇಶಿಸಲಿರುವ ಪ್ರಥಮ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌ ನಾಯಕ ನಟರಾಗಿ ನಟಿಸಲಿದ್ದಾರೆ. ಹೀಗೆಂದವರು ಬೇರೆ ಯಾರೂ ಅಲ್ಲ, ಸ್ವತಃ ಮಂಜುನಾಥ್‌!

ಈಗ ಥರ್ಟಿ ಪ್ಲಸ್‌ ಹರೆಯದವರಾದ ಮಾಸ್ಟರ್‌ ಮಂಜುನಾಥ್‌(ಕ್ಷಮಿಸಿ, ಅವರೀಗ ಮಿಸ್ಟರ್‌ ಮಂಜುನಾಥ್‌!) ನಿರ್ದೇಶಕರಾಗುತ್ತಿದ್ದಾರೆ. ಅವರು ನಿರ್ದೇಶಿಸಲಿರುವ ಪ್ರಥಮ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌ ನಾಯಕ ನಟರಾಗಿ ನಟಿಸಲಿದ್ದಾರೆ. ಹೀಗೆಂದವರು ಬೇರೆ ಯಾರೂ ಅಲ್ಲ, ಸ್ವತಃ ಮಂಜುನಾಥ್‌!

ಆಶ್ಚರ್ಯವಾಯಿತೇ? ಇದು ನಿಜ, ಮೊನ್ನೆ ‘ ಐಶ್ವರ್ಯ’ಚಿತ್ರದ ಪ್ರದರ್ಶನವೊಂದನ್ನು ಏರ್ಪಡಿಸಿ ಇಂದ್ರಜಿತ್‌ ತಮ್ಮ ಪರಮಾಪ್ತರನ್ನು ಕರೆಸಿದ್ದರು. ಮಂಜುನಾಥ್‌ಗೂ ಆಹ್ವಾನ ಹೋಗಿತ್ತು.

ಕೋರಮಂಗಲದ ಫೋರಮ್‌ನ ಪಿವಿಆರ್‌ನಲ್ಲಿ ಚಿತ್ರ ವೀಕ್ಷಿಸಿ ಹೊರಬಂದ ಮಂಜುನಾಥ್‌, ನಿರ್ದೇಶಕ ಇಂದ್ರಜಿತ್‌ ಅವರ ಹೆಗಲ ಮೇಲೆ ಕೈ ಹಾಕುತ್ತಾ, ಕ್ಯಾಮರಾಗಳಿಗೆ ಪೋಸ್‌ ಕೊಟ್ಟು ಹೇಳಿದ್ದೇನೆಂದರೆ :

‘ನಾನು ನಿರ್ದೇಶಿಸುವ ಮೊದಲ ಚಿತ್ರದಲ್ಲಿ ಇಂದ್ರಜಿತ್‌ ನಾಯಕ ನಟರಾಗಿ ನಟಿಸಲಿದ್ದಾರೆ. ಹೊಸ ವರ್ಷದ ಕೊಡುಗೆಯಾಗಿ ಈ ಚಿತ್ರ ಸೆಟ್ಟೇರಲಿದೆ.’ ಮಂಜುನಾಥ್‌ ಹೀಗೆಂದಾಗ ಬೇರೆ ಯಾರಾದರೂ ಇದ್ದರೆ ಥ್ರಿಲ್‌ ಆಗಿ ತಲೆಗೂದಲು ನಿಮಿರುತ್ತಿತ್ತು. ಆದರೆ ಇಂದ್ರಜಿತ್‌ಗೆ ಹಾಗಾಗಲಿಲ್ಲ. ಇಂದ್ರಜಿತ್‌ ತಮ್ಮ ಬೋಡು ತಲೆಯ ಮೇಲೆ ಕೈ ಹಾಕಿ ನಕ್ಕರು ಅಷ್ಟೇ!

ಮೌನಂ ಸಮ್ಮತಿ ಲಕ್ಷಣವಾ?

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada