»   » ಸಾಲಕ್ಕೆ ಸಾಲಾನಾ ಸಾಲ ಕೊಡುವ ಗಣೇಶ ತೆರೆಗೆ ಬಂದ!

ಸಾಲಕ್ಕೆ ಸಾಲಾನಾ ಸಾಲ ಕೊಡುವ ಗಣೇಶ ತೆರೆಗೆ ಬಂದ!

Subscribe to Filmibeat Kannada

ಅನಂತನಾಗ್ ಮತ್ತು ಜಗ್ಗೇಶ್ ಈವಾರ ನಗೆಪಾತ್ರೆಯನ್ನು ಹೊತ್ತು ತಂದಿದ್ದಾರೆ. 'ಗಣೇಶ'ಚಿತ್ರ ಶುಕ್ರವಾರ(ನ.16) ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

'ಸಾಲಕ್ಕೆ ಸಾಲಾನಾ ಸಾಲ ಕೊಡುವೆ'ಅಡಿ ಶೀರ್ಷಿಕೆಯೇ ಚಿತ್ರದ ತಾಕತ್ತನ್ನು ಬಿಡಿಸಿಟ್ಟಿದೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವ ದಿನೇಶ್ ಬಾಬು, ಚಿತ್ರದಲ್ಲಿ ನಗೆ ಬೆಳದಿಂಗಳ ಸುರಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಹೊಸಪೇಟೆ ಶ್ರೀನಿವಾಸ್ ಮತ್ತು ಕೆ.ವಿ.ಆರ್.ಕೃಷ್ಣ ಚಿತ್ರದ ನಿರ್ಮಾಪಕರು. ಅಜಯ್, ರಂಗಾಯಣ ರಘು, ಹರೀಶ್ ರಾಯ್, ಮನ್ ದೀಪ್ ರಾಯ್, ಧರ್ಮ, ವನಿತಾ ವಾಸು ತಾರಾಗಣದಲ್ಲಿದ್ದಾರೆ. ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಪುತ್ರ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ರಾಂನಾರಾಯಣ್, ಗಂಧರ್ವ ಹಾಡು ಬರೆದಿದ್ದಾರೆ.

ಸಂತೋಷ್, ವೀರೇಶ್, ಸಿದ್ದಲಿಂಗೇಶ್ವರವೆಂಕಟೇಶ್ವರ, ತುಮಕೂರಿನ ಗಾಯತ್ರಿ, ಮೈಸೂರಿನ ಗೋಕುಲ್, ಹಾಸನದ ಭಾನು, ಚಿತ್ರದುರ್ಗದ ಬಸವೇಶ್ವರ, ಶಿವಮೊಗ್ಗದ ಮಲ್ಲಿಕಾರ್ಜುನ, ದಾವಣಗೆರೆಯ ಗೀತಾಂಜಲಿ, ಹುಬ್ಬಳ್ಳಿಯ ಪದ್ಮ, ಬೆಳಗಾವಿಯ ನಿರ್ಮಲ್, ಗದಗದ ಕರ್ನಾಟಕ್ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada