»   » ‘ಹೊಡಿ ಮಗ’ ಖ್ಯಾತಿಯ ಗುರುಕಿರಣ್‌ಗೊಂದು ಪ್ರಶಸ್ತಿ

‘ಹೊಡಿ ಮಗ’ ಖ್ಯಾತಿಯ ಗುರುಕಿರಣ್‌ಗೊಂದು ಪ್ರಶಸ್ತಿ

Subscribe to Filmibeat Kannada


‘ಈ ಸಲವೂ ನನಗೆ ರಾಜ್ಯ ಸರ್ಕಾರದ ಪ್ರಶಸ್ತಿ ಬರಲಿಲ್ಲ... ಪ್ರಶಸ್ತಿ ರಾಜಕೀಯ ನನಗೆ ಗೊತ್ತಿಲ್ಲ...’ ಎಂದು ಗುರ್‌ಗುರ್‌ ಅಂದಿದ್ದ ಸಂಗೀತ ನಿರ್ದೇಶಕ ಗುರುಕಿರಣ್‌ಗೊಂದು ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನೀಡಿದವರು ಸರ್ಕಾರವಲ್ಲ... ಜನ...

ರೇಡಿಯೋ ಮಿರ್ಜಿ ಎಫ್‌ಎಂ ರೇಡಿಯೋದ ಪ್ರಶಸ್ತಿ ಗುರೂಗೆ ದಕ್ಕಿದೆ. 2005-06ನೇ ಸಾಲಿನ ಅತ್ಯುತ್ತಮ ಗೀತೆಯಾಗಿ ಗುರು ಸೃಷ್ಟಿಸಿದ ‘ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ’ ಆಯ್ಕೆಗೊಂಡಿದೆ. ಅತಿಹೆಚ್ಚು ಕೇಳುಗರು, ಈ ಗೀತೆಗೆ ಓಟು ಹಾಕಿರುವುದರಿಂದ, ರೇಡಿಯೋ ಮಿರ್ಜಿ ಗೌರವ ಅವರಿಗೆ ಸಂದಾಯವಾಗಿದೆ.

ಚಿತ್ರರಂಗದಲ್ಲಿ ಇಷ್ಟು ಕಾಲ(6ವರ್ಷ) ಸೈಕಲ್‌ ತುಳಿದದ್ದಕ್ಕೆ ಸಾರ್ಥವಾಯಿತು ಎಂಬರ್ಥದಲ್ಲಿ ಗುರು ಪ್ರತಿಕ್ರಿಯಿಸಿದ್ದಾರೆ. ಕೈತುಂಬ ಕೆಲಸ ಮಾಡುತ್ತಿರುವ ಗುರು, ತಲೆತುಂಬ ಸಂಗೀತದ ಹುಚ್ಚು ತುಂಬಿಕೊಂಡಿದ್ದಾರೆ. ‘ಹೊಡಿ ಮಗ’ದಂತಹ ಇನ್ನಷ್ಟು ಪ್ರಯೋಗಗಳಿಗೆ, ಪ್ರಶಸ್ತಿ ಸ್ಫೂರ್ತಿ ನೀಡಬಹುದೇನೋ?

ನಿಮ್ಮ ಅನಿಸಿಕೆ ಬರೆಯಿರಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada