»   » ‘ಜೋಗಿ’ ನಿರ್ಮಾಪಕನ ಮುಂದೆ ಇನ್‌ಕಮ್‌ ಟ್ಯಾಕ್ಸ್‌ ಗುಮ್ಮ!

‘ಜೋಗಿ’ ನಿರ್ಮಾಪಕನ ಮುಂದೆ ಇನ್‌ಕಮ್‌ ಟ್ಯಾಕ್ಸ್‌ ಗುಮ್ಮ!

Subscribe to Filmibeat Kannada

ಬೆಂಗಳೂರು : ‘ಜೋಗಿ’ ಚಿತ್ರದಿಂದ 30ಕೋಟಿ ರೂಪಾಯಿ ಲಾಭ ಬಂದಿದೆ ಎಂದು ಪತ್ರಿಕೆಗಳಲ್ಲಿ ಮಿಂಚುತ್ತಿದ್ದ ನಿರ್ಮಾಪಕ ರಾಮಪ್ರಸಾದ್‌ ಅವರ ಕಛೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವಿಜಯನಗರದಲ್ಲಿರುವ ರಾಮಪ್ರಸಾದ್‌ ಅವರ ಎರಡು ಸ್ಟೂಡಿಯೋ, ಒಂದು ಫ್ಯಾಕ್ಟರಿ ಹಾಗೂ ಗಾಂಧಿ ನಗರದ ಕಚೇರಿಯನ್ನು ವಶಪಡಿಸಿಕೊಂಡು ಗುರುವಾರ ಸಂಜೆಯ ತನಕ ತನಿಖೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಸಹ ಇದೇ ರೀತಿ ತನಿಖೆ ನಡೆಸಿದ್ದನ್ನು ಇಲ್ಲಿ ಸ್ಮ ರಿಸಬಹುದು.

ವಿಜಯೋತ್ಸವ : ನಗರದ ಅರಮನೆ ಮೈದಾನದಲ್ಲಿ ನ.27ರಂದು ನಡೆಸಬೇಕಿದ್ದ ‘ಜೋಗಿ’ ವಿಜಯೋತ್ಸವವನ್ನು, ಡಿ.18ರ ಭಾನುವಾರ ನಡೆಸಲು ರಾಮಪ್ರಸಾದ್‌ ಸಿದ್ಧತೆ ನಡೆಸಿರುವ ಬೆನ್ನಲ್ಲಿಯೇ ಈ ದಾಳಿ ನಡೆದಿದೆ. ಈ ಕಾರ್ಯಕ್ರಮದ ಅಂದಾಜು ವೆಚ್ಚ 75ಲಕ್ಷ ರೂಪಾಯಿ ಎನ್ನಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada