»   » ಮಾಲಾಶ್ರೀ ಅಭಿಮಾನಿಗಳಿಗೊಂದು ಖುಷಿ ಸಮಾಚಾರ!!!

ಮಾಲಾಶ್ರೀ ಅಭಿಮಾನಿಗಳಿಗೊಂದು ಖುಷಿ ಸಮಾಚಾರ!!!

Subscribe to Filmibeat Kannada


ಮಾಲಾಶ್ರೀ ಅಭಿನಯದ ಹೊಸ ಚಿತ್ರ ‘ಕಿರಣ್‌ ಬೇಡಿ’ 2007ರ ಮಧ್ಯದಲ್ಲಿ ಸೆಟ್ಟೇರಲಿದೆ. ಕಿರಣ್‌ ಬೇಡಿ ಜೀವನ ಚರಿತ್ರೆಯನ್ನು ಆಧರಿಸಿ, ಚಿತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾಲಾಶ್ರೀಗಂತೂ ಚಿತ್ರದ ಬಗ್ಗೆ ಸಕತ್ತು ಹೆಮ್ಮೆ. ಗಂಡನ ಜೇಬು ತುಂಬಿಸುವ ವಿಶ್ವಾಸ!

ತಮ್ಮ ಪತ್ನಿಗಾಗಿ ರಾಮು ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ‘ಕಿರಣ್‌ ಬೇಡಿ’ಗೂ ಮೊದಲು ‘ಗೂಳಿ’ ಚಿತ್ರವನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಮೆಜೆಸ್ಟಿಕ್‌, ಸ್ವಾಮಿ, ತಂಗಿಗಾಗಿ, ಸರ್ದಾರ ನಿರ್ದೇಶಿಸಿದ ಪಿ.ಎನ್‌.ಸತ್ಯ ಚಿತ್ರದ ನಿರ್ದೇಶಕರು. ಚಿತ್ರದ ನಾಯಕ; ಸುದೀಪ್‌. 2007ರ ಈ ಯೋಜನೆಗಳು, ಜೇಬು ತುಂಬಿಸುತ್ತವೆ ಎಂಬ ವಿಶ್ವಾಸ ರಾಮು ಅವರದಲ್ಲಿದೆ.

2007ರ ಜನವರಿಯಲ್ಲಿ ‘ಪ್ರೀತಿಗಾಗಿ’ ಬಿಡುಗಡೆ ಮಾಡುವುದಾಗಿ ಹೇಳುವ ರಾಮು, ಉಪೇಂದ್ರ ನಾಯಕರಾಗಿ ಅಭಿನಯಿಸುತ್ತಿರುವ ‘ಮಸ್ತಿ’ ಚಿತ್ರಕ್ಕೀಗ ದುಡ್ಡು ಸುರಿಯುತ್ತಿದ್ದಾರೆ. ಅವರಿಗೆ ಲಕ್ಷ್ಮಿಕಟಾಕ್ಷ ಸದಾ ಇರಲಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada