»   » ಇದು ನಟ ದೇವರಾಜ್‌ ಟೈಂಪಾಸ್‌ ವೃತ್ತಾಂತ!

ಇದು ನಟ ದೇವರಾಜ್‌ ಟೈಂಪಾಸ್‌ ವೃತ್ತಾಂತ!

Posted By: Staff
Subscribe to Filmibeat Kannada

'ಎಲ್ಲಿಯ ಟೈಂಪಾಸ್‌? ಕಳೆದ ಒಂದೂವರೆ ವರ್ಷದಿಂದ ನಟನೆ ಬಿಟ್ಟರೆ ಸಿಮೆಂಟ್‌ ಹಾಗೂ ಇಟ್ಟಿಗೆ ಜೊತೆಯೇ ನನ್ನ ಟೈಂಪಾಸ್‌ ಸಾಗಿದೆ" ಎನ್ನುತ್ತಾರೆ ಚಿತ್ರನಟ ದೇವರಾಜ್‌.

ತಮ್ಮ ಹೊಸಮನೆ ನಿರ್ಮಾಣದಲ್ಲಿ ನಿರತರಾಗಿರುವ ದೇವರಾಜ್‌ ಬಿಡುವಿನ ಸಮಯವೆಲ್ಲ ಅದಕ್ಕೇ ಮೀಸಲಿಟ್ಟಿರುವುದಾಗಿ ಹೇಳುತ್ತಾರೆ. 'ತೋಟದಲ್ಲಿ ಮಕ್ಕಳ ಜತೆ ಕಾಲ ಕಳೆಯುವುದು ನನಗೆ ತುಂಬಾ ಇಷ್ಟ . ಆದರೆ ಈಗ ಅದಕ್ಕೆ ಪುರುಸೊತ್ತೇ ಸಿಗುವುದಿಲ್ಲ ನೋಡಿ!" ಎಂದು ತಮ್ಮ ಬ್ಯುಸೀ ಶೆಡ್ಯೂಲ್‌ ಪರಿಚಯಿಸುತ್ತಾರೆ.

'ಏನೇ ಅಡೆತಡೆಗಳಿದ್ದರೂ ಹೆಂಡತಿ ಮಕ್ಕಳೊಡನೆ ಪ್ರವಾಸಕ್ಕೆ ಸಮಯ ಹೊಂದಿಸಿಕೊಳ್ಳುತ್ತೇನೆ. ಮೋಹಕ ತಾಣ ಗೋವಾಕ್ಕೆ ಪದೇಪದೇ ಹೋಗುತ್ತೇನೆ. ಬೀಚ್‌ನಲ್ಲಿ ಕಾಲ ಕಳೆಯುತ್ತೇನೆ" ಎಂದು ಪ್ರವಾಸದ ಹವ್ಯಾಸ ತೆರೆದಿಡುತ್ತಾರೆ.

'ಮನೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವಾಗ ಸಂಗೀತ ಆಲಿಸುತ್ತೇನೆ. ಶಾಸ್ತ್ರೀಯ ಸಂಗೀತ, ಗಜಲ್‌ ಮನಕ್ಕೆ ಮುದ ನೀಡುತ್ತವೆ. ಲೌಡ್‌ ಮ್ಯೂಸಿಕ್‌ ಆಲಿಸುವುದಿಲ್ಲ" ಎಂದು ಸಂಗೀತ ಪ್ರೇಮ ಮೆರೆಯುತ್ತಾರೆ.

ಕನ್ನಡ ಕಾದಂಬರಿಗಳು ಮತ್ತು ಜೀವನ ಚರಿತ್ರೆಗಳನ್ನು ಓದುವ ಹವ್ಯಾಸವೂ ಅವರಿಗಿದೆ. ಯಶವಂತ ಚಿತ್ತಾಲ ಅವರ ಕಾದಂಬರಿಗಳು ನನ್ನ ಮೇಲೆ ಪ್ರಭಾವ ಬೀರಿವೆ. ಆಕಸ್ಮಾತ್‌ ಯಾರಾದರೂ, ತೆರೆಯ ಮೇಲೆ ಫಳಫಳಿಸೊ ಚಿತ್ರನಟರು ನಿಜಜೀವನದಲ್ಲೂ ಹಾಗೇ ಇರ್ತಾರೆ ಅಂತೇನಾದ್ರೂ ಕಲ್ಪಿಸಿಕೊಂಡರೆ ಅದಕ್ಕಿಂಥ ದೊಡ್ಡ ದುರಂತ ಬೇರ್ಯಾವುದೂ ಇಲ್ಲ ಎಂದು ದೇವರಾಜ್‌ ಹೇಳುತ್ತಾರೆ.

ಶೂಟಿಂಗ್‌ ಇಲ್ಲದ ಸಮಯದಲ್ಲಿ ಮಧ್ಯಮ ವಗಂದ ಜನ ಹೇಗೆ ಬದುಕು ಸಾಗಿಸುತ್ತಾರೋ ಅದೇರೀತಿ ನಾವೂ ಬದುಕು ಸಾಗಿಸ್ತೀವಿ ಎಂದು ದೇವರಾಜ್‌ ಟೈಂಪಾಸ್‌ ಪ್ರವರಕ್ಕೆ ಮಂಗಳ ಹಾಡುತ್ತಾರೆ.

English summary
Devraj, thinking about his dream house every minute

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada