ಸುದೀಪ್ or ದರ್ಶನ್ 'ಸೂಪರ್ ಹೀರೋ' 3D ಚಿತ್ರ?
ಕನ್ನಡದಲ್ಲಿ ಮತ್ತೆ 3D ಹೆಸರು ಕೇಳಿಬರುತ್ತಿದೆ. ಜೋಗಯ್ಯ ನೆನಪಾಗುತ್ತಿದೆಯಾ? ಮರೆತುಬಿಡಿ, ಹೀಗೆಂದು ಸಾಕ್ಷಾತ್ ಶಿವಣ್ಣನೇ ಹೇಳಿಯಾಗಿದೆ. ಜೋಗಯ್ಯನ 3D ಅವಾಂತರ ಮರೆತು ಈಗ 'ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರವನ್ನು ಗಾಂಧಿನಗರಕ್ಕೆ ಕೊಟ್ಟಿದ್ದ ರವೀಂದ್ರ ಅವರು ನಿರ್ದೇಶನದ ಚಿತ್ರವನ್ನು ನೋಡಲು ರೆಡಿಯಾಗಿ.
ಹೌದು, ಸಾಮಾನ್ಯ ಫೀಚರ್ ಫಿಲ್ಮ್ ಗಳಿಂದ 3D ತಂತ್ರಜ್ಞಾನದ ಫೀಚರ್ ಫಿಲ್ಮ್ ಕಡೆ ಹೆಜ್ಜೆ ಇಟ್ಟಿರುವ ರವೀಂದ್ರ, ಸೂಪರ್ ಹೀರೋ ಒಬ್ಬನ ಕಥೆಯನ್ನಾಧರಿಸಿ ಸಿನಿಮಾ ನಿರ್ದೇಶಿಸಲಿದ್ದಾರಂತೆ. ಇದನ್ನು ಸ್ವತಃ ರವೀಂದ್ರ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅವರ ನಿರ್ದೇಶನದ 'ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರವನ್ನು ಮರುಬಿಡುಗಡೆ ಮಾಡಲು ಪ್ರಯತ್ನದಲ್ಲಿ ಬ್ಯುಸಿಯಾಗಿದ್ದಾರೆ.
ರವೀಂದ್ರ ಮಾತು " ಕ್ರಿಸ್ತಶಕ 1100 ರ ಕಾಲದ ಸೂಪರ್ ಹೀರೋ ಒಬ್ಬನನ್ನು ಈಗಿನ ಪ್ರಪಂಚಕ್ಕೆ ಕರೆತರುವ ಸಾಹಸದ ಕಥೆ. ಶೀರ್ಷಿಕೆ ಇನ್ನೂ ಖಚಿತವಾಗಿಲ್ಲ. 'ಸೂಪರ್ ಹೀರೋ 100' ಶೀರ್ಷಿಕೆಯೇ ಅಂತಿಮ ಆಗಲೂಬಹುದು. ದರ್ಶನ್ ಅಥವಾ ಸುದೀಪ್ ಕಾಲ್ ಶೀಟ್ ಬೇಕು. ಆದ್ರೆ ಸಿಗೋದು ಕಷ್ಟ, ಫೆಬ್ರವರಿಯೊಳಗೆ ಚಿತ್ರೀಕರಣ ಮುಗಿಸಬೇಕಾದ ಅನಿವಾರ್ಯತೆ ಇದೆ" ಉಳಿದಿರುವ ಪ್ರಶ್ನೆ, ಸೂಪರ್ ಹೀರೋ ಯಾರು? ಸುದೀಪ್ ಅಥವಾ ದರ್ಶನ್... (ಒನ್ ಇಂಡಿಯಾ ಕನ್ನಡ)


Click it and Unblock the Notifications











