»   » ಆಕ್ಷನ್ ಸ್ಟಾರ್ ಆಗಿ ಬದಲಾದ ಶ್ರೀಮುರಳಿ

ಆಕ್ಷನ್ ಸ್ಟಾರ್ ಆಗಿ ಬದಲಾದ ಶ್ರೀಮುರಳಿ

Subscribe to Filmibeat Kannada
Srimurali
ರಿಯಲ್ ಸ್ಟಾರ್, ಪವರ್ ಸ್ಟಾರ್, ಗೋಲ್ಡನ್ ಸ್ಟಾರ್...ಹೀಗೇ ಕನ್ನಡ ಚಿತ್ರರಂಗದ ಸ್ಟಾರ್ ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನೆನ್ನೆ ಮೊನ್ನೆಯವರೆಗೂ ನಟ ಶ್ರೀಮುರಳಿಗೆ 'ಸ್ಟಾರ್' ಟೈಟಲ್ ಇರಲಿಲ್ಲ. ಇನ್ನು ಮುಂದೆ ಅವರ ಹೆಸರಿನ ಜೊತೆಗೆ ಆಕ್ಷನ್ ಸ್ಟಾರ್ ಎಂಬ ಬಿರುದು ಸೇರಿಕೊಳ್ಳಲಿದೆ.

ಪ್ರತಿಭಾನ್ವಿತ ನಟ ಶ್ರೀ ಮುರಳಿ, ಈಗ "ಆಕ್ಷನ್ ಸ್ಟಾರ್" ಆಗಿ ಬದಲಾಗಿದ್ದಾರೆ. ಶಿವಮಣಿ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಈ ಬಿರುದನ್ನು ರೆಬೆಲ್ ಸ್ಟಾರ್ ಅಂಬರೀಶ್ ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಂಬರೀಶ್ ಮಾತನಾಡುತ್ತಾ, ಶ್ರೀ ಮುರಳಿ ತನ್ನ ವೃತ್ತಿ ಜೀವನದಲ್ಲಿ ಇನ್ನೂ ಬೆಳೆದು ಕನ್ನಡ ಚಿತ್ರರಂಗವನ್ನು ಬೆಳಗುವಂತಾಗಲಿ ಎಂದು ಆಶೀರ್ವದಿಸಿದರು.


ಪ್ರಶಸ್ತಿ ಸ್ವೀಕರಿಸಿದ ನಂತರ ಆಕ್ಷನ್ ಸ್ಟಾರ್ ಶ್ರೀ ಮುರಳಿ ಮಾತನಾಡುತ್ತಾ,ತನ್ನ ತಂದೆ ಚನ್ನೇಗೌಡರ ಸೂಚನೆಗಳನ್ನು ಪಾಲಿಸುತ್ತೇನೆ.ಈ ಬಿರುದು ನನಗೆ ಹೊಸ ಹುರುಪು ತಂದಿದ್ದು ಕನ್ನಡಿಗರ ಮೆಚ್ಚುಗೆ ಪಡೆಯಲು ಇನ್ನು ಹೆಚ್ಚಿನ ಶ್ರಮ ವಹಿಸುತ್ತೇನೆ ಎಂದು ವಾಗ್ದಾನ ಮಾಡಿದರು.

ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಶ್ರೀ ಮುರಳಿ ಸಹೋದರ ವಿಜಯ ರಾಘವೇಂದ್ರ, ಚಿತ್ರದ ನಿರ್ಮಾಪಕ ಜಗನ್ನಾಥ್ ಪೈ, ಅಂಬರೀಶ್, ಚನ್ನೇಗೌಡ, ಚಿತ್ರದ ನಾಯಕಿ ಶರ್ಮಿಳಾ ಮಾಂಡ್ರೆ ಮುಂತಾದವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada