ಸುದೀಪ್ 'ಈಗ' ಚಿತ್ರದ ಹೀರೋ ಅರ್ಧಗಂಟೆಯಲ್ಲೇ ಸಾವು

By Rajendra

ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ತೆಲುಗು ಮತ್ತು ತಮಿಳು ದ್ವಿಭಾಷಾ 'ಈಗ' ಚಿತ್ರದ ಹೀರೋ ಚಿತ್ರ ಆರಂಭವಾದ ಅರ್ಧಗಂಟೆಯಲ್ಲೇ ಸಾವಪ್ಪುತ್ತಾನೆ. ಆತನ ಆತ್ಮ ಒಂದು ನೊಣ (ಈಗ)ದಲ್ಲಿ ಲೀನವಾಗುತ್ತದೆ. ಅಲ್ಲಿಂದ ಅಸಲಿ ಕಥೆ ಆರಂಭವಾಗುತ್ತದೆ. ಚಿತ್ರದಲ್ಲಿ ಸುದೀಪ್ ಅವರದು ಪ್ರಮುಖ ಪಾತ್ರ.

"ಒಂದು ಸಣ್ಣ ನೊಣವೊಂದು ಬಲಾಢ್ಯ ವಿಲನ್‌ನನ್ನು ಹೇಗೆ ಎದುರಿಸುತ್ತದೆ? ನೊಣದ ದ್ವೇಷಕ್ಕೆ ಕಾರಣವೇನು? ಎಂಬ ಅಂಶಗಳನ್ನು ಆಸಕ್ತಿಕರವಾಗಿ, ಉತ್ಕಟಭರಿತವಾಗಿ ಹಾಗೂ ವಿನೋದಭರಿತವಾಗಿ ತೋರಿಸುತ್ತಿದ್ದೇವೆ. ಈ ಚಿತ್ರದಲ್ಲಿ ಹೃದಯಕ್ಕೆ ಆಪ್ತವೆನಿಸುವ ಪ್ರೇಮಕತೆ ಇದೆ. ವಿಜುವಲ್ ಎಫೆಕ್ಟ್ಸ್‌ಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಯುತ್ತಿವೆ".

ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಸದ್ಯಕ್ಕೆ ನಿರ್ಮಾಣ ನಂತರದ ಕಾರ್ಯಗಳು ನಡೆಯುತ್ತಿವೆ ಎಂದು ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ತಿಳಿಸಿದ್ದಾರೆ. ಒಂದು ಸಣ್ಣ ಕೀಟ ಬಲಾಢ್ಯ ಮನುಷ್ಯನನ್ನು ಹೇಗೆ ನೆಲಕ್ಕೆ ಉರುಳಿಸುತ್ತದೆ ಎಂಬುದೇ ಚಿತ್ರದ ಕಥಾವಸ್ತು. ಇದನ್ನು ತೆರೆಯ ಮೇಲೆಯೇ ನೋಡಿ ಆನಂದಿಸಿ ಎನ್ನುತ್ತಾರೆ ರಾಜಮೌಳಿ.

ಚಿತ್ರದ ಉಳಿದ ಪಾತ್ರವರ್ಗದಲ್ಲಿ ನಾನಿ, ಸಮಂತಾ ನಟಿಸಿದ್ದಾರೆ. ಚಿತ್ರದಲ್ಲಿ ಗ್ರಾಫಿಕ್ಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಟಾಲಿವುಡ್‌ನಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಎಂದೇ ಖ್ಯಾತರಾಗಿರುವ ರಾಜಮೌಳಿ ಈ ಬಾರಿ ಇನ್ನೇನು ಮಾಡುತ್ತಾರೋ ಎಂಬ ಕುತೂಹಲ ಸದ್ಯಕ್ಕೆ ನೆಲೆಗೊಂಡಿದೆ. (ಏಜೆನ್ಸೀಸ್)

More from Filmibeat

English summary
S S Rajamouli next, Eega to ensure that the output is top notch. Director SS Rajamouli’s upcoming experimental film "Eega" is a bilingual and in Tamil. Kannada actor Sudeep are playing the main lead roles in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X