ಸಿಕ್ಕಾಪಟ್ಟೆ ಸುಸ್ತಾಗಿ ಆಸ್ಪತ್ರೆ ಸೇರಿದ ಇಲಿಯಾನಾ

By Rajendra

ಬಿಡುವಿಲ್ಲದಂತೆ ಸಿಕ್ಕಾಪಟ್ಟೆ ಕೆಲಸ ಮಾಡಿ ಸುಸ್ತಾದ ಬೆಳ್ಳಿ ಗೊಂಬೆ ಇಲಿಯಾನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಲುಗಿನ ಎರಡು ಯಶಸ್ವಿ ಚಿತ್ರಗಳಲ್ಲಿ 'ಶಕ್ತಿ' ಮತ್ತು 'ನೇನೂ ನಾ ರಾಕ್ಷಸಿ' ಚಿತ್ರಗಳಲ್ಲಿ ಬಿಡುವಿಲ್ಲದಂತೆ ಆಕೆ ತೊಡಗಿಕೊಂಡಿದ್ದೇ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ. ಇಲಿಯಾನಾರನ್ನು ಪರೀಕ್ಷಿಸಿದ ವೈದ್ಯರು ಕೆಲ ದಿನಗಳ ಮಟ್ಟಿಗೆ ಎಲ್ಲೂ ಹೋಗದೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇಲಿಯಾನಾರ ತಂಗಿ ಫರಾ ಅವರು ಟ್ವೀಟ್ ಮಾಡಿದ್ದು, ಮತ್ತಷ್ಟು ಮಂದಿ ಅಭಿಮಾನಿಗಳು ಇಲಿಯಾನಾರನ್ನು ಫಾಲೋ ಮಾಡುವಂತಾಗಿದೆ. ಇತ್ತೀಚೆಗೆ ಹಣ ಹಿಂತಿರುಗಿಸಿಲ್ಲ ಎಂಬ ಕಾರಣಕ್ಕೆ ತಮಿಳು ನಿರ್ಮಾಪಕನೊಬ್ಬ ಇಲಿಯಾನಾ ಮೇಲೆ ದೂರು ದಾಖಲಿಸಿದ್ದ. ತೆಲುಗಿನ 'ಶಕ್ತಿ' ಚಿತ್ರದ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಆ ಚಿತ್ರದ ನಿರ್ಮಾಪಕನೂ ಇಲಿಯಾನಾ ಮೇಲೆ ಕೆಂಡಾಮಂಡಲವಾಗಿದ್ದ.

ಸದ್ಯಕ್ಕೆ ಟಾಲಿವುಡ್‌ನ ಈ ಗೊಂಬೆ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲ. ಈ ಕಷ್ಟ ಕಾಲದಲ್ಲಿ ಬಾಲಿವುಡ್‌ನಿಂದ ಕರೆ ಬಂದಿದೆಯಂತೆ. ಒಂದು ಕಾಲದ ಬೆಳ್ಳಿಪರದೆಯ ಮಾಯಾಂಗನೆ ಮಂದಾಕಿನಿ ಪಾತ್ರದಲ್ಲಿ ಇಲಿಯಾನಾ ನಟಿಸಲಿದ್ದಾರೆ ಎಂಬುದು ಸುದ್ದಿ. Once Upon A Time in Mumbai ಎಂಬ ಚಿತ್ರದಭಾಗ 2ರಲ್ಲೂ ಇಲಿಯಾನಾ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ. ಎಷ್ಟೇ ಆಗಲಿ ಕನ್ನಡ 'ಹುಡುಗ ಹುಡುಗಿ' ಚಿತ್ರದ ಹಾಡೊಂದಕ್ಕೆ ರು.30 ಲಕ್ಷ ಎಣಿಸಿದ್ದರಲ್ಲ ಇಲಿಯಾನಾ. (ದಟ್ಸ್‌ಕನ್ನಡ ಚಿತ್ರವಾರ್ತೆ)

More from Filmibeat

English summary
Tollywood sources says that actress Ileana has been hospitalized due to over work. Apparently long shooting schedule has taken a toll on her health. Ileana’s sister Farrah has been updated this news in her Twitter account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X