Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೂತನ ದಾಂಪತ್ಯಕ್ಕೆ ಅಡಿಯಿಟ್ಟ ಪೋಷಕ ನಟಿ ಸೀತಾ
ಕನ್ನಡ ಚಿತ್ರರಂಗದ ಪೋಷಕ ತಾರೆ ಸೀತಾ ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಸೀತಾ ತನ್ನದೇ ಆದಂತಹ ನಟನೆಗೆ ಹೆಸರಾಗಿದ್ದಾರೆ. ಕಿರುತೆರೆ ಕಲಾವಿದ ಸತೀಶ್ ಅವರನ್ನು ಸೀತಾ ಅವರು ಚೆನ್ನೈನಲ್ಲಿ ಶುಕ್ರವಾರ (ಸೆ.17) ಮದುವೆಯಾಗಿದ್ದಾರೆ.
ಈ ಹಿಂದೆ ಸೀತಾ ಅವರಿಗೆ ನಟ ಹಾಗೂ ನಿರ್ದೇಶಕ ಪಿ ಎಸ್ ಪಾರ್ಥೀಬನ್ ಜೊತೆಗೆ ವಿವಾಹವಾಗಿತ್ತು.ಹಳೆಯ ದಾಂಪತ್ಯದ ಫಲಶ್ರುತಿಯಾಗಿ ಸೀತಾ ಮೂವರು ಮಕ್ಕಳ ತಾಯಿಯಾಗಿದ್ದರು. ಪಿ ಎಸ್ ಕೀರ್ತನಾ , ಅಭಿನಯ ಹಾಗೂ ರಾಧಾಕೃಷ್ಣನ್ ಮಕ್ಕಳು. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ಪಾರ್ಥೀಬನ್ ಮತ್ತು ಸೀತಾ ವಿವಾಹ ವಿಚ್ಛೇಧನ ಪಡೆದು ಬೇರ್ಪಟ್ಟಿದ್ದರು.
ಸೀತಾ ಹಾಗೂ ಸತೀಶ್ ಇಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಒಬ್ಬರಿಗೊಬ್ಬರು ಆತ್ಮೀಯರಾಗಿ ಮದುವೆಯಲ್ಲಿ ಒಂದಾಗಿದ್ದಾರೆ. ಇವರ ವಿವಾಹ ಮಹೋತ್ಸವವು ಆತ್ಮೀಯರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ನೆರವೇರಿತು. ಸೀತಾ ಅವರ ಹಿರಿಯ ಮಗಳು ಪಿ ಎಸ್ ಕೀರ್ತನಾ ಅವರು ಮಣಿರತ್ನಂ ಅವರ 'ಅಮೃತ' ಚಿತ್ರದಲ್ಲಿ ಮುಖ್ಯಪಾತ್ರವನ್ನು ಪೋಷಿಸಿದ್ದರು.
ಕನ್ನಡದ ಹಲವಾರು ಚಿತ್ರಗಳಲ್ಲಿ ಸೀತಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಸುಂಟರಗಾಳಿ' ಸೇರಿದಂತೆ 'ಗಂಡುಗಲಿ ಕುಮಾರರಾಮ', 'ಮೀರಾ ಮಾಧವ ರಾಘವ', 'ಆತ್ಮೀಯ', 'ಮೇಷ್ಟ್ರು' (ತೆರೆಕಾಣಬೇಕಾಗಿರುವ ಚಿತ್ರ) ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.