ಸ್ವಲ್ಪ ಓವರ್ ಆಗಿದ್ದಕ್ಕೆ ಶ್ರಿಯಾಗೆ ಅಲ್ಲಿ ಸಕತ್ ನೋವಾಗ್ತಿದೆ!

ದರ್ಜಿ ಟೇಪ್ ಗೆ ಕೂಡ ನಾಚಿಕೆಯಾಗುವಷ್ಟು ಸುಂದರ ಸೊಂಟವುಳ್ಳ ಬಾಲೆ ಶ್ರಿಯಾಗೆ ಕಿಬ್ಬೊಟ್ಟೆ ನೋವಂತೆ. ಅಯ್ಯೋ! ಇದಕ್ಕೆ ಯಾರು ಕಾರಣವಲ್ಲ. ಸ್ವಯಂ ಶ್ರಿಯಾ ಮಾಡಿಕೊಂಡ ಕರ್ಮ.
ಬಳುಕುವ ಸೊಂಟ ಇಟ್ಟುಕೊಂಡು ಎಲ್ಲಾ ಚಿತ್ರಗಳಲ್ಲೂ ವೈಯಾರದಿಂದ ನರ್ತಿಸುವ ಶ್ರಿಯಾಳಿಗೆ ತನ್ನ ಸೌಂದರ್ಯದ ಮೇಲೆ ಎಲ್ಲಿಲ್ಲದ ಅಭಿಮಾನ. ತನ್ನ ಫಿಗರ್ ಮೈಂಟೇನ್ ಮಾಡಲು ಕಟ್ಟು ನಿಟ್ಟಿನ ಜೀವನ ಶೈಲಿಯನ್ನು ಆಕೆ ಅಳವಡಿಸಿಕೊಂಡಿದ್ದಾಳೆ.
ಯೋಗ, ಬೆಲ್ಲಿ ಡ್ಯಾನ್ಸ್, ಡಯಟಿಂಗ್ ಮಾಡಿಕೊಂಡಿದ್ದ ಶ್ರಿಯಾಗೆ ಇದ್ದಕ್ಕಿದ್ದಂತೆ ಅದೇನು ಬಂತೋ, ಇನ್ನೂ ಸಣ್ಣ ಆಗಬೇಕು ಎನಿಸಿ, ಕ್ರಾಶ್ ಕೋರ್ಸ್ ನಲ್ಲಿ ಪವರ್ ಯೋಗ ಮಾಡತೊಡಗಿದ್ದಾಳೆ. ಈ ಮಧ್ಯೆ ಅಲ್ಲಿ ಇಲ್ಲಿ ಸುತ್ತಾಟ, ಕ್ಲಬ್, ಪಬ್ ಓಡಾಟ(ನಿಜವಲ್ವಂತೆ ಆಕೆನೇ ಹೇಳಿದ್ಳು) ಜಾಸ್ತಿಯಾಗಿ, ಡಯಟಿಂಗ್ ಕೈ ಕೊಟ್ಟಿದೆ. ಓವರ್ ಆದ ಯೋಗ ತನ್ನ ಪ್ರಭಾವ ಬೀರಿ ಶ್ರಿಯಾ ಕರಳು ಹಿಂಡಿದೆ.
ಮಾದಕತೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ಶ್ರಿಯಾಗೆ ತನ್ನ ಹೊಸ ಸಂಕಟವನ್ನು ಯಾರೊಟ್ಟಿಗೂ ಹೇಳಲು ಆಗುತ್ತಿಲ್ಲ. ಮಾಧ್ಯಮದವರ ಕಿವಿಗೆ ಬಿದ್ದರೆ, ಇಲ್ಲಸಲ್ಲದ ಪುಕಾರು ಹುಟ್ಟುತ್ತದೆ ಎಂಬ ಅಂಜಿಕೆಯಂತೆ.
ಈ ಮಧ್ಯೆ ವಿಷಯ ತಿಳಿದ ಅವಳ ಕಟ್ಟಾ ಅಭಿಮಾನಿಗಳು, ಮೇಡಂ ನೀವು ಇನ್ನೂ ದಪ್ಪಗಾದರೂ ಚಿಂತೆಯಿಲ್ಲ. ಸೌಥ್ ನಲ್ಲಿ ಕೃಶಕಾಯ ಸುಂದರಿಯರಿಗಿಂತ, ಸ್ಥೂಲಕಾಯ ಸುಂದರಿಯರಿಗೆ ಬೆಲೆ, ಒಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಂಡು ತೆರೆಮೇಲೆ ನಾಲ್ಕು ಸ್ಟೆಪ್ ಹಾಕಿ ಸಾಕು ಎನ್ನುತ್ತಿದ್ದಾರೆ. ಶ್ರಿಯಾಳಿಗೆ ಅಭಿಮಾನಿಗಳು ಕೂಗು ಕೇಳಿಸಲಿ ಎಂಬುದು ನಮ್ಮ ಆಶಯ.


Click it and Unblock the Notifications











