ನಟಿ ಐಶ್ವರ್ಯ ಮಗಳು ಹೆಣ್ಣು ಮಗುವಿನ ರಾಯಭಾರಿ!

ಬಿಗ್ ಬಿ ಕುಟುಂಬ ಇದಕ್ಕೆ ಅರ್ಹವಾಗಿದ್ದು, ಅಮಿತಾಬ್ ಇದಕ್ಕೆ ಸಂಪೂರ್ಣ ಸಹಮತಿ ಸೂಚಿಸುತ್ತಾರೆ ಎಂಬ ಭರವಸೆ ಇದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸುಖಾಸುಮ್ಮನೆ ಶುಭಾಷಯಗಳನ್ನು ಕೋರುವುದರ ಮಧ್ಯೆ ಹಲವರು ಚಿಂತಾನಾರ್ಹ ವಿಷಯಗಳನ್ನು ಹರಿಯ ಬಟ್ಟಿದ್ದಾರೆ.
ಖ್ಯಾತ ಅಂಕಣಗಾರ್ತಿ ಶೋಭಾ ಡೇ ಅಂತೂ, 'ಲಿಟಲ್ ಮಿಸ್ ವರ್ಲ್ಡ್' ಆಗಮನವಾಗಿದೆ. ತಡವೇಕೆ ಬಿಗ್ ಬಿ, ಈ ಮಗುವನ್ನು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ವಿರುದ್ಧದ ಪ್ರಚಾರಾಂದೋಲನ ರಾಯಭಾರಿಯಾಗಿ ನೇಮಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂಬ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅದಕ್ಕೂ ಮುನ್ನ, ಅಂದರೆ ಐಶ್ವರ್ಯ ಚೊಚ್ಚಲ ಡೆಲಿವರಿಗೂ ಮುನ್ನ ಐಶ್ ಳಷ್ಟೇ ಮುದ್ದಾದ ಹೆಣ್ಣು ಮಗು ಬೇಕು ಎಂದು ಅಭಿಷೇಕ್ ಬಚ್ಚನ್ ಹಂಬಲಿಸಿದ್ದರು ಎಂಬುದು ಗಮನಾರ್ಹ ಮತ್ತು ಸ್ವಾಗತಾರ್ಹ.
ಕಮಾಲ್ ಆರ್ ಖಾನ್ ಅಂತೂ ನಾನು ಯಾವಾಗಲೋ ಹೇಳಿದ್ದೆ. ನಿಮ್ಮ ಮನೆಗೆ ಮುದ್ದಾದ ಹೆಣ್ಣು ಕೂಸೇ ಬರಲಿದೆ. ಈ ಹೆಣ್ಣು ಸುಳಿಯ ಆಗಮನದಿಂದ ಬಿಗ್ ಬಿ ಕುಟುಂಬದ ಅತ್ಯುತ್ತಮ ದಿನಗಳು ಆರಂಭವಾಗಲಿವೆ ಎಂದು ಟ್ವೀಟಿಸಿದ್ದಾರೆ. ಬಿಪಾಶಾ ಬಸು ಸಹ ಥ್ರಿಲ್ ಆಗಿದ್ದು, ಲಿಟಲ್ ಏಂಜೆಲ್ ಗೆ ತುಂಬು ಸ್ವಾಗತ ಕೋರಿದ್ದಾರೆ. ಡೆಲ್ ಕಮ್ ಸ್ವೀಟ್ ಬೇಬಿ ಎಂದಿದ್ದಾರೆ.


Click it and Unblock the Notifications











