ಐಶ್ವರ್ಯಾ ಮಗು ಭವಿಷ್ಯದಲ್ಲಿ ಗಾಯಕಿಯಾಗ್ತಾಳಂತೆ!
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಹೆಣ್ಣು ಕೂಸಿಗೆ ಮುದ್ದಾದ ಹೆಸರಿಡಲು ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಬಂಟರ ಸಂಪ್ರದಾಯದಂತೆ ಐಶ್ವರ್ಯಾ ರೈ ಮೂಲ ಮನೆತನ ಊರು ಮಂಗಳೂರಿನಲ್ಲೇ ನಾಮಕರಣ ಮಹೋತ್ಸವ ಜರುಗಬೇಕಾಗುತ್ತದೆ.
ಆದರೆ, ಅಜ್ಜ ಬಿಗ್ ಬಿ ಇಷ್ಟದಂತೆ ಮುಂಬೈನಲ್ಲೇ ನಾಮಕರಣ ಕಾರ್ಯಕ್ರಮ ನಡೆಸುವ ಸಾಧ್ಯತೆಯಿದೆ. ಮಗುವಿಗೆ ಹೆಸರು ಸೂಚಿಸಲು ಎಲ್ಲರೂ ನಾ ಮುಂದು ತಾ ಮುಂದು ಎಂದೂ ಮುಗಿ ಬೀಳುತ್ತಿದ್ದಾರೆ. ಇನ್ನೊಂದೆಡೆ ಮಗುವಿನ ಭವಿಷ್ಯ ಕುರಿತು ಪ್ರಖ್ಯಾತ ಜ್ಯೋತಿಷಿಗಳು ತಮ್ಮ ಭವಿಷ್ಯ ವಾಣಿ ನುಡಿದಿದ್ದಾರೆ.
ಖ್ಯಾತ ಸಂಖ್ಯಾಶಾಸ್ತ್ರಜ್ಞ ದೈವಜ್ಞ ಶರ್ಮ ಅವರ ಲೆಕ್ಕಾಚಾರದ ಪ್ರಕಾರ ಐಶೂ ಮಗು ಸಂಗೀತ ಕ್ಷೇತ್ರದಲ್ಲಿ ಉದಯೋನ್ಮುಖ ತಾರೆಯಾಗಿ ಬೆಳೆಯುತ್ತಾಳಂತೆ.
ಜನಪ್ರಿಯ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ದೈವಜ್ಞ ಶರ್ಮ ಅವರು ಈ ರೀತಿ ಭವಿಷ್ಯ ನುಡಿದಿದ್ದಾರೆ. ಐಶ್ವರ್ಯಾ ರೈ ಅವರ ಮಗಳು ಗಾಯಕಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
16.11.2011ರಂದು ಜನಿಸಿರುವುದರಿಂದ ಚಂದ್ರನ ಪ್ರಭಾವ ಮಗುವಿನ ಮೇಲೆ ಹೇರಳವಾಗಿದೆ. ಕಲೆ, ಸಂಗೀತದಲ್ಲಿ ಸಹಜವಾಗಿ ಆಕೆಗೆ ಒಲವು ಮೂಡಲಿದೆ. ಅಜ್ಜ ಅಮಿತಾಬ್ ಬಚ್ಚನ್ ರೀತಿ ವಾಕ್ಪಟು ಹಾಗೂ ಮುತ್ತಜ್ಜ ಹರಿವಂಶ್ ರಾಯ್ ಬಚ್ಚನ್ ರೀತಿ ಸಾಹಿತ್ಯದಲ್ಲೂ ಆಕೆ ಪ್ರವೀಣೆಯಾದರೆ ಅಚ್ಚರಿ ಏನಿಲ್ಲ.
ಒಟ್ಟಾರೆ, ಅಮ್ಮ ಐಶ್ವರ್ಯಾ ಹಾಗೂ ಅಪ್ಪ ಅಭಿಷೇಕ್ ರಂತೆ ಅವರ ಮಗು ಕೂಡಾ ಸ್ವಂತ ಪರಿಶ್ರಮದಿಂದ ಸಾಧಕಿಯಾಗಿ ಸೆಲೆಬ್ರಿಟಿ ಎನಿಸಿಕೊಳ್ಳುತ್ತಾಳೆ.
ಅಮ್ಮ ಐಶ್ವರ್ಯಾಳಂತೆ ಚುರುಕಾದ ಸುಂದರ ಕಂಗಳು, ಅಪ್ಪನಂತೆ ಮುಗುಳ್ನಗೆವುಳ್ಳವಳಾಗಿದ್ದು, ಪುರಾತನ ಸಂಪ್ರದಾಯ, ಹಿರಿಯರಿಗೆ ಗೌರವ ನೀಡುವ ಸತ್ರಜೆಯಾಗಿ ಬಾಳುತ್ತಾಳೆ ಎಂದು ಜ್ಯೋತಿಷಿ ಶರ್ಮ ಹೇಳಿದ್ದಾರೆ.
ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಜನಿಸಿದ ಐಶೂ ಕುವರಿ ಮೇಲೆ ಲಾರ್ಡ್ ಆಫ್ ಸೆವೆನ್ ಹಿಲ್ಸ್ ಕೃಪೆ ಸದಾ ಇರಲಿ


Click it and Unblock the Notifications











