»   » ಅಂಬರೀಶ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

ಅಂಬರೀಶ್ ಗೆ ಆಂಧ್ರ ಸರಕಾರದ ನಂದಿ ಪ್ರಶಸ್ತಿ

Subscribe to Filmibeat Kannada
nandi award conferred to ambareesh
ರೆಬೆಲ್ ಸ್ಟಾರ್ ಅಂಬರೀಶ್ ಗೆ 2005ನೇ ಸಾಲಿನ ಆಂಧ್ರ ಸರಕಾರದ ಪ್ರತಿಷ್ಠಿತ "ನಂದಿ" ಪ್ರಶಸ್ತಿ ಲಭಿಸಿದೆ. ಭಾನುವಾರ ಹೈದರಾಬಾದ್ ನ ಲಾಲ್ ಬಹಾದ್ದೂರ್ ಶಾಸ್ತ್ರೀ ಕ್ರೀಡಾಂಗಣ ದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಂಬರೀಶ್ ಗೆ ಈ ಪ್ರಶಸ್ತಿ ಯನ್ನು ಆಂಧ್ರ ಪ್ರದೇಶ ಸರಕಾರದ ಮುಖ್ಯಮಂತ್ರಿ ವೈ. ಎಸ್. ರಾಜಶೇಕರ ರೆಡ್ಡಿ ಪ್ರದಾನ ಮಾಡಿದರು. ಪ್ರಶಸ್ತಿ 5 ಲಕ್ಷ ರುಪಾಯಿ ನಗದು, ನೆನಪಿನ ಕಾಣಿಕೆ ಮತ್ತು ಸನ್ಮಾನ ಪತ್ರಗಳನ್ನು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಅಂಬರೀಶ್ ಮಾತನಾಡುತ್ತಾ, ''ಆಂಧ್ರ ಸರಕಾರ ನೀಡಿದ ಈ ಪ್ರಶಸ್ತಿ ಗೆ ನಾನು ಆಭಾರಿ ಆಗಿದ್ದೇನೆ. ನನ್ನ ಮಡದಿ ಕೂಡ ತೆಲುಗಿನವರಾಗಿದ್ದು ಕನ್ನಡ ಮತ್ತು ತೆಲುಗುಚಿತ್ರರಂಗದ ನಂಟು ಬಹಳ ಹಿಂದಿನದು'' ಎಂದು ಸಂಪೂರ್ಣ ತೆಲುಗಿನಲ್ಲಿ ಮಾತನಾಡಿದರು.

ಜೀವಮಾನ ಶ್ರೇಷ್ಠ ಸಾಧನೆಗಾಗಿ ನೀಡುವ ಈ ಪ್ರಶಸ್ತಿಯನ್ನು 2003,2004,2005 ಮತ್ತು 2006 ರ ಸಾಲಿಗೆ ಕ್ರಮವಾಗಿ ತೆಲುಗು ನಟ ಕೃಷ್ಣ, ಖ್ಯಾತ ಸಂಗೀತ ಸಂಯೋಜಕ ಇಳಯರಾಜ, ಕನ್ನಡ ನಟ ಅಂಬರೀಶ್ ಮತ್ತು ಹಿಂದಿ ನಟಿ ವಹೀದಾ ರೆಹಮಾನ್ ಗೆ ನೀಡಲಾಯಿತು.

ಬಹಳ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್ ಮಯವಾಗಿತ್ತು. ತೆಲುಗು ಚಿತ್ರರಂಗಕ್ಕೆ ನೀಡಿದ ಪ್ರಶಸ್ತಿ ಕೂಡ ಕಾಂಗ್ರೆಸ್ ಬೆಂಬಲಿಸುವ ಕಲಾವಿದರಿಗೆ ನೀಡಲಾಗಿದೆ ಎಂಬ ಅಪಸ್ವರವೂ ಕೇಳಿಬಂದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada