ಪಾರ್ವತಮ್ಮಗೈರು ಹಾಜರಿಯಲ್ಲಿ ಅಣ್ಣಾಬಾಂಡ್ ಮುಹೂರ್ತ

'ಜಾಕಿ' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಪಾರ್ವತಮ್ಮ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಅನಾರೋಗ್ಯದ ನಿಮಿತ್ತ ಚಿತ್ರರಂಗದ ಎಲ್ಲಾ ಸಾರ್ವಜನಿಕ ಸಮಾರಂಭಗಳಿಗೆ ಅಕ್ಷರಶಃ ಮರೆಯಾಗಿದ್ದರು. ಶಿವಣ್ಣನ ಇಪ್ಪತ್ತೈದರ ಸವಿನೆನಪಿನ ಕಾರ್ಯಕ್ರಮಗಳಲ್ಲೂ ಪಾರ್ವತಮ್ಮ ಕಾಣಿಸಿಕೊಂಡಿರಲಿಲ್ಲ.
'ಹುಡುಗರು' ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತಂದಿದ್ದರು. 'ಹುಡುಗರು' ಚಿತ್ರದಂತೆ ಎಲ್ಲ ಕನ್ನಡ ಚಿತ್ರಗಳು ಶತದಿನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಇದೀಗ ಮತ್ತೆ ಪಾರ್ವತಮ್ಮನವರ ಆರೋಗ್ಯ ಕೈಕೊಟ್ಟು ಅಣ್ಣಾಬಾಂಡ್ ಗೆ ಬರಲಾಗಲಿಲ್ಲ.
ಅನಾರೋಗ್ಯದಿಂದ ಬಳಲುತ್ತಿರುವ ಪಾರ್ವತಮ್ಮನವರನ್ನು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದಾರೆ ರಾಘವೇಂದ್ರ ರಾಜ್ ಕುಮಾರ್. ಆದರೂ ವಯಸ್ಸಿನ ಸಹಜ ಅನಾರೋಗ್ಯ ಅವರನ್ನು ಸಮಾರಂಭಕ್ಕೆ ಬರಲು ಬಿಡಲಿಲ್ಲ. ಆರೋಗ್ಯದಲ್ಲಿ ಚೇತರಿಕೆ ಆಗಿ ಆದಷ್ಟು ಬೇಗ ಹೊಸ ಹುರುಪು, ಉತ್ಸಾಹದದೊಂದಿಗೆ ಕನ್ನಡ ಚಿತ್ರೋದ್ಯಮಕ್ಕೆ ಈ 'ವಜ್ರೇಶ್ವರಿ'ಯ ಆಗಮನವಾಗಲಿ ಎಂಬುದು ಎಲ್ಲರ ಹಾರೈಕೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











