ಪುನೀತ್ ಅಣ್ಣಾಬಾಂಡ್ ಗೆ ಆರಂಭದಲ್ಲೇ ಶುಭ ಶಕುನ

Next »

« Previous

Ravichandran
"ಇದೊಂದು ಅದ್ಧೂರಿ ಸಿನಿಮಾ. ಜೊತೆಗೆ ಇದೊಂದು ನವರಸಗಳ ಬಾಂಡ್. ಉತ್ತಮ ಕಥೆ ಎಂಬ ಬಲವಾದ ತಳಹದಿಯ ಮೇಲೆ ಅಣ್ಣಾಬಾಂಡ್ ಸಿನಿಮಾ ಮಾಡುತ್ತಿದ್ದೇನೆ. ಜಾಕಿಗಿಂತ ಇದು ಉತ್ತಮವಾಗಿರಬೇಕು ಎಂಬುದೇ ನನ್ನ ಆಶಯವಾಗಿತ್ತು, ಆಗಿದೆ. ಜೊತೆಗೆ ಅಣ್ಣಾವ್ರ ಜಡ್ಜ್ ಮೆಂಟ್ ಬಲವೂ ಇದೆಯಲ್ಲ!" ಎಂದರು ಅಣ್ಣಾಬಾಂಡ್ ರೂವಾರಿ ಸೂರಿ.

"ಇದು ಹಳೇ ಬಾಂಡ್ ಮಾದರಿಯ ಸಿನಿಮಾ ಅಲ್ಲ. ಈಗಲೂ ಸಾಕಷ್ಟು ಕಡೆ ಒಳ್ಳೊಯವರನ್ನು ಅಟ್ಟಕ್ಕೇರಿಸುವಾಗ 'ಅಣ್ಣಾಬಾಂಡ್' ಎಂಬ ಪದವನ್ನು ಬಳಸುತ್ತಾರೆ. ಈ ಅಣ್ಣಾಬಾಂಡ್ ಆ ರೀತಿಯದು" ಎಂದು ಹೇಳಿದ ಸೂರಿ ಕಥೆಯ ಗುಟ್ಟನ್ನು ಸ್ವಲ್ಪಮಟ್ಟಿಗೆ ರಟ್ಟು ಮಾಡಿದ್ದಾರೆ. ಮುಂದಿನದನ್ನು ತೆರೆಯಮೇಲೆ ನೋಡಿ ಆನಂದಿಸಿ... ಎಂದು ಹೇಳಿಲ್ಲ ಅಷ್ಟೇ!

ಪುನೀತ್ ಬಹಳಷ್ಟು ಚಿತ್ರಗಳಿಗೆ ಆರಂಭ ಫಲಕ ತೋರಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಇದಕ್ಕೂ ಅದಕ್ಕೇ ಬಂದಿದ್ದರು. ಅವರು ಆರಂಭ ಫಲಕ ತೋರಿಸಿದರೆ ಶುಭಶಕುನ ಎಂಬುದು ಗಾಂಧಿನಗರದಲ್ಲಿ ಜನಜನಿತವಾಗಿರುವ ಮಾತು. ರವಿಮಾಮ ಬಂದು ಆರಂಭ ಫಲಕ ಹಿಡಿದಿದ್ದಾರೆ. ಇನ್ನು ಅಣ್ಣಾಬಾಂಡ್ ಹಿಡಿಯುವವರು ಯಾರು?!

Next »

« Previous

More from Filmibeat

English summary
Kannada Movie Anna Bond launched. This is 18th Movie of Powerstar Puneet Rajkumar. Like many movies of Puneet raj, this also clapped by crazy star Ravichandran.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X