ಪ್ರಾರ್ಥನೆ ನೋಡಲಿದ್ದಾರೆ ಸಿಎಂ ಯಡಿಯೂರಪ್ಪ

By Rajendra

ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಸದಾಶಿವ ಶೆಣೈ ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳಿರುವ ಚಿತ್ರ 'ಪ್ರಾರ್ಥನೆ'. ಈ ಚಿತ್ರವನ್ನು "ವಿಶ್ವ ಮಾತೃಭಾಷೆ ದಿನ" ಮಾರ್ಚ್ 12ರಂದು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವೀಕ್ಷಿಸಲಿದ್ದಾರೆ.

ಶೆಣೈ ಅವರ 'ಪ್ರಾರ್ಥನೆ' ಚಿತ್ರ ಹಲವು ವಿಶೇಷಗಳಿಂದ ಕೂಡಿದೆ. ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಚಿತ್ರದಲ್ಲಿ ಅಭಿನಯಿಸಿದ್ದು ಈಗಾಗಲೆ ಸಾಕಷ್ಟು ಸುದ್ದಿಯಾಗಿದೆ. ಹಾಗೆಯೇ ನಟ ಪ್ರಕಾಶ್ ರೈ ಕೂಡ ಚಿತ್ರದ ಪ್ರಮುಖ ಪಾತ್ರವನ್ನು ಪೋಷಿಸಿದ್ದಾರೆ. ಸಾಮಾಜಿಕ ಸಮಸ್ಯೆಯೊಂದರ ಕಥಾಹಂದರವನ್ನು 'ಪ್ರಾರ್ಥನೆ' ಒಳಗೊಂಡಿದೆ.

ಇಷ್ಟಕ್ಕೂ ಈ ಚಿತ್ರದ ವಿಶೇಷತೆ ಏನೆಂದರೆ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿ 'ಪ್ರಾರ್ಥನೆ' ಕತೆ ಸಾಗುತ್ತದೆ.ಅನಂತನಾಗ್ ಮತ್ತು ಪವಿತ್ರಾ ಲೋಕೇಶ್ ಚಿತ್ರದ ಮುಖ್ಯ ಪಾತ್ರಧಾರಿಗಳು. ತಮ್ಮ ಮಗುವನ್ನು ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕೆ?ಯಾವ ಮಾಧ್ಯಮಕ್ಕೆ ಸೇರಿಸಿದರೆ ಉತ್ತಮ? ಎಂಬ ಪ್ರಚಲಿತ ಸಮಸ್ಯೆಗಳಿಗೆ ಚಿತ್ರದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ .

ಚಿತ್ರದ ಪಾತ್ರವರ್ಗದಲ್ಲಿ ಪ್ರಕಾಶ್ ರೈ, ಅನಂತನಾಗ್, ಪವಿತ್ರಾ ಲೋಕೇಶ್, ಬಿ ಸಿ ಪಾಟೀಲ್,ಅಶೋಕ್, ಮಾಸ್ಟರ್ ಸಚಿನ್ ಮುಂತಾದವರು ಇದ್ದಾರೆ. ಖ್ಯಾತ ಛಾಯಾಗ್ರಾಹಕ ಎಸ್ ರಾಮಚಂದ್ರ ಕ್ಯಾಮೆರಾ ಹಿಡಿದ ಕೊನೆಯ ಚಿತ್ರವಿದು, ಚಿತ್ರದಲ್ಲಿನ ಒಂದು ಪ್ರಾರ್ಥನೆ ಗೀತೆಯಿದ್ದು ಅದಕ್ಕೆ ಸಂಗೀತ ಸಂಯೋಜಿಸಿ ವೀರ್ ಸಮರ್ಥ್.

More from Filmibeat

English summary
Karnataka chief minister B S Yeddyurappa to wathch Kannada movie Prarthane on World Mother Tongue Day, March 12. The news was disclosed by debutant director of the film Sadashiva Shenoy. Prakash Raj, Ananthnag, BC Patil, Pavitra Lokesh and the Infosys founder Sudha Murthy are in cast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X