ಸಿಸಿಎಲ್ ನಲ್ಲಿ ಪುನೀತ್, ಶಿವಣ್ಣ, ಉಪೇಂದ್ರ ಯಾಕಿಲ್ಲ?

ಬೆಂಗಳೂರು ಬುಲ್ಡೋಜರ್ಸ್ ತಂಡ ಬೆಂಗಾಳಿಗರ ವಿರುದ್ಧ ಸಿಸಿಎಲ್ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಆದರೆ ಬೆಂಗಳೂರು ತಂಡದಲ್ಲಿ ಹಿರಿಯ ನಟರಾದ ಶಿವಣ್ಣ, ಉಪೇಂದ್ರ ಮತ್ತು ಪುನೀತ್ ಇಲ್ಲದಿರುವುದು ಸಿನಿಪ್ರೇಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ ಕುಮಾರ್ ಕುಟುಂಬವನ್ನು ಉದ್ದೇಶಪೂರ್ವಕವಾಗಿಯೇ ಸಿಸಿಎಲ್ ನಿಂದ ಹೊರಗಿಡಲಾಗಿದೆ ಎಂಬ ದೂರು ಕೇಳಿಬರುತ್ತಿದೆ. ಕಾರಣ ಕಳೆದ ಬಾರಿ ನಡೆದ ಕೋಲಾಹಲ. ಆದರೆ ರಾಘವೇಂದ್ರ ರಾಜ್ ಕುಮಾರ್, ಆಟ ನಡೆಯುತ್ತಿರುವಾಗ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಉಪಸ್ಥಿತರಿದ್ದರು. ರಾಜ್ ಕುಟುಂಬ ಕ್ರಿಕೆಟ್ ನಿಂದ ಹೊರಗಿರುವುದು ಸುಳ್ಳು ಎಂಬುದು ಈ ಮೂಲಕ ಜಗಜ್ಜಾಹೀರಾಗಿದೆ. ಇನ್ನು ಉಪೇಂದ್ರ ಶೂಟಿಂಗ್ ನಲ್ಲಿ ಬ್ಯುಸಿ ಅಷ್ಟೇ.

ಇಡೀ ತಂಡದ ಆಯ್ಕೆ ಸರಿಯಾಗಿಲ್ಲ ಎಂಬ ನಿರ್ಮಾಪಕರ ಸಂಘದ ಸೆಕ್ರೆಟರಿ ಗಣೇಶ್ ಅವರ ಮಾತಿಗೂ ಯಾವುದೇ ಪುಷ್ಟಿ ದೊರೆತಿಲ್ಲ. ಕಾರಣ, ಸ್ವತಃ ಶಿವರಾಜ್ ಕುಮಾರ್ ಹಾಗೂ ಪುನೀತ್, "ನಾವಿಬ್ಬರೂ ಬಿಡುವಿಲ್ಲದ ಶೂಟಿಂಗ್ ನಲ್ಲಿ ನಿರತರಾಗಿದ್ದೇವೆ. ಹಾಗಾಗಿ ಸಿಸಿಎಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಯಾವುದೇ ಸಂಶಯಕ್ಕೆ, ರಾಜಕೀಯಕ್ಕೆ ಅವಕಾಶವಿಲ್ಲ. (ಒನ್ ಇಂಡಿಯಾ ಕನ್ನಡ)

More from Filmibeat

English summary
While the Bangalore Bulldozers brought smiles on the fans face after winning their its match against Bengal Tigers in Celebrity Cricket League, the absence of Shivaraj Kumar, Puneet Rajkumar and Upendra disappointed them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X