ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ಸಾರಥಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರಕ್ಕೆ 'ಸಾರಥಿ' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಕೆ ಸಿ ಎನ್ ಚಂದ್ರಶೇಖರ್ ನಿರ್ಮಿಸುತ್ತಿದ್ದು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಆಕ್ಷನ್, ಕಟ್ ಹೇಳಲಿದ್ದಾರೆ. ಸಾರಥಿ ಚಿತ್ರೀಕರಣ ನವೆಂಬರ್ 19ರಿಂದ ಆರಂಭವಾಗಲಿದೆ.
ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ಛಾಯಾಗ್ರಹನ ಕೃಷ್ಣಕುಮಾರ್ ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಉಳಿದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಬ್ರೇಕ್ ಗಾಗಿ ಕಾಯುತ್ತ್ತಿರುವ ದರ್ಶನ್ ಗೆ 'ಸಾರಥಿ' ಚಿತ್ರ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.
ಈ ಹಿಂದೆ ಕೆ ಸಿ ಎನ್ ಚಂದ್ರಶೇಖರ್ ನಿರ್ಮಿಸಿದ್ದ 'ಭೂಪತಿ' ಚಿತ್ರದಲ್ಲಿ ದರ್ಶನ್ ಅಭಿನಯಿಸಿದ್ದರು. 'ಭೂಪತಿ' ಚಿತ್ರ ದರ್ಶನ್ ಅಭಿನಯದ 25ನೇ ಚಿತ್ರವಾಗಿತ್ತು. ಕೆಸಿಎನ್ ಅವರಿಗೆ ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ದರ್ಶನ್ ಕಾಲ್ ಶೀಟ್ ಕೊಟ್ಟಿದ್ದರು. ಎರಡು ವರ್ಷಗಳ ನಂತರ ಇದೀಗ 'ಸಾರಥಿ' ಚಿತ್ರ ಸೆಟ್ಟೇರುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











