»   » ಕಲಾವಿದರ ಸಂಘಕ್ಕೆ ದರ್ಶನ್ ರು.25 ಲಕ್ಷ ಧನ ಸಹಾಯ

ಕಲಾವಿದರ ಸಂಘಕ್ಕೆ ದರ್ಶನ್ ರು.25 ಲಕ್ಷ ಧನ ಸಹಾಯ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಲನಚಿತ್ರ ಕಲಾವಿದರ ನೆರವಿಗೆ ಧಾವಿಸಿ ಬಂದಿದ್ದಾರೆ. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ದೃಷ್ಟಿಯಿಂದ ರು.25 ಲಕ್ಷ ದಾನ ಮಾಡುವುದಾಗಿ ದರ್ಶನ್ ಪ್ರಕಟಿಸಿದ್ದಾರೆ.

ಅನೇಕ ವರ್ಷಗಳಿಂದ ಕನ್ನಡ ಚಲನಚಿತ್ರೋದ್ಯಮದಲ್ಲಿದ್ದುಕೊಂಡೂ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರಕಾರ ರು.50 ಲಕ್ಷಗಳನ್ನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ನೆರವು ನೀಡಲು ದರ್ಶನ್ ಕೂಡ ಮುಂದೆ ಬಂದಿದ್ದಾರೆ.

ಸರಕಾರ ನೀಡಿರುವ ರು.50 ಲಕ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನೂ ಕೂಡ ಅದರಲ್ಲಿ ಅರ್ಧದಷ್ಟು ಹಣವನ್ನು, ಅಂದರೆ ರು.25 ಲಕ್ಷಗಳನ್ನು ನೀಡುತ್ತಿರುವುದಾಗಿ ದರ್ಶನ್ ತಿಳಿಸಿದ್ದಾರೆ. ನಟ ದರ್ಶನ್ ಅವರನ್ನು ಆದರ್ಶವಾಗಿ ತೆಗೆದುಕೊಂಡು ಉಳಿದ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ಕೈಲಾದ ಧನಸಹಾಯನ್ನು ಕಲಾವಿದರ ಸಂಘಕ್ಕೆ ಮಾಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಮನವಿ ಮಾಡಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
Challenging star Darshan donates Rs. 24 lakhs to the Karnataka film artists association. State govt recently pledged support for the cause of artists association and donates Rs.50 lakh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada