For Quick Alerts
  ALLOW NOTIFICATIONS  
  For Daily Alerts

  ಒಬ್ಬರ ತೆಕ್ಕೆಗೆ ಅಣ್ಣಾ ಬಾಂಡ್, ಚಿಂಗಾರಿ ವಿತರಣೆ ಹಕ್ಕುಗಳು

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಅಣ್ಣಾ ಬಾಂಡ್' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿಂಗಾರಿ ಚಿತ್ರಗಳ ವಿಶಾಲ ಕರ್ನಾಟಕದ ವಿತರಣೆ ಹಕ್ಕುಗಳು ಒಬ್ಬರಿಗೇ ಸಿಕ್ಕಿರುವುದು ವಿಶೇಷ.

  ಮೂಲತಃ ಸ್ಟಾಕ್ ಬ್ರೋಕರ್ ವೃತ್ತಿಯಲ್ಲಿದ್ದ ಪ್ರಸಾದ್ ತೀರಾ ಇತ್ತೀಚೆಗಷ್ಟೆ ಸಿನಿಮಾ ಬಿಜಿನೆಸ್‌ಗೆ ಇಳಿದಿದ್ದರು. 'ಓನ್ಲಿ ವಿಷ್ಣುವರ್ಧನ' ಚಿತ್ರದ ಮೈಸೂರು ಪ್ರದೇಶದ ವಿತರಣೆ ಹಕ್ಕುಗಳನ್ನು ಪಡೆದಿದ್ದ ಅವರು ಈಗ ಏಕಾಏಕಿ ವಿಶಾಲ ಕರ್ನಾಟಕಕ್ಕೆ ಹಂಚಿಕೆದಾರರಾಗಿ ಬೆಳೆದಿದ್ದಾರೆ.

  ರು.15 ಕೋಟಿಗೆ ಅಣ್ಣಾ ಬಾಂಡ್ ಮಾರಾಟವಾಗಿದ್ದರೆ 'ಚಿಂಗಾರಿ' ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ರು.9 ಕೋಟಿಗೆ ಖರೀದಿಸಿ ಪ್ರಸಾದ್ ಹೊಸ ದಾಖಲೆ ನಿರ್ಮಿಸಿದ್ದಾರೆ."ನಮ್ಮ ಡಿಸ್ಟ್ರಿಬ್ಯೂಷನ್ ಕಂಪನಿ ಬಿಗ್ ಸ್ಟಾರ್‌ಗಳ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಚಿತ್ರಗಳನ್ನು ಕೊಳ್ಳಲು ಮುಂದಾಗಿದೆ " ಎಂದು ಪ್ರಸಾದ್ ಹೇಳಿದ್ದಾರೆ.

  ಸೂರಿ ನಿರ್ದೇಶನ ದ 'ಅಣ್ಣಾ ಬಾಂಡ್' ಚಿತ್ರದ ವಿತರಣೆ ಹಕ್ಕುಗಳು ಇನ್ನೂ ನಿರ್ಮಾಣ ಹಂತದಲ್ಲೇ ದಾಖಲೆ ಬೆಲೆಗೆ ಮಾರಾಟವಾಗಿರುವುದು ಗಾಂಧಿನಗರದಲ್ಲಿ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಒಂದರ್ಥದಲ್ಲಿ ಕನ್ನಡ ಚಿತ್ರರಂಗಕ್ಕೆ ಇದು ಹೊಸ 'ಪವರ್' ನೀಡಿದೆ ಎನ್ನಬಹುದು. (ಏಜೆನ್ಸೀಸ್)

  English summary
  If Sandalwood sources to be belived Power Star Puneet Rajkumar lead movie Anna Bond distribution rights sold over Rs. 15 crores for the entire state. A new film distributor Prasad has purchased the rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X