»   » ಚಿಂಗಾರಿ ದಾಖಲೆ ಗಳಿಕೆ ಬಗ್ಗೆ ದರ್ಶನ್ ಹೇಳಿದ್ದೇನು, ಓದಿ...

ಚಿಂಗಾರಿ ದಾಖಲೆ ಗಳಿಕೆ ಬಗ್ಗೆ ದರ್ಶನ್ ಹೇಳಿದ್ದೇನು, ಓದಿ...

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ 180 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು. ಅದು ಮೊದಲ ವಾರದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 6 ಕೋಟಿಗಿಂತ ಹೆಚ್ಚು ಕಲೆಕ್ಷನ್ ಗಳಿಸಿ 'ದಾಖಲೆ' ಮೆರೆದಿದೆ. ಈ ವಿಷಯವನ್ನು ಸ್ವತಃ ಚಿಂಗಾರಿ ವಿತರಕ ಪ್ರಸಾದ್, ಸಂತೋಷಕೂಟದಲ್ಲಿ ಮಾಧ್ಯಮದೊಂದಿಗೆ ಸಂತೋಷಪಟ್ಟು ಹಂಚಿಕೊಂಡಿದ್ದಾರೆ.

ಇಷ್ಟೇ ಅಲ್ಲ, ಚಿಂಗಾರಿ ನಾಯಕ ಹಾಗೂ ಇದೀಗ 'ಬಾಕ್ಸ್ ಆಫೀಸ್ ಸುಲ್ತಾನ್' ಎನಿಸಿರುವ ದರ್ಶನ್, ವಿತರಕ ಪ್ರಸಾದ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ಇದುವರೆಗೆ ಯಾವ ವಿತರಕರೂ ನನ್ನ ಬಳಿ ಬಂದು ನನ್ನ ಚಿತ್ರದಿಂದ ಅಷ್ಟು ದುಡ್ಡು ಬಂತು, ಇಷ್ಟು ಲಾಭ ಬಂತು ಅಂತ ಹೇಳಿರಲೇ ಇಲ್ಲ. ಇದೇ ಮೊದಲ ಬಾರಿಗೆ 'ಚಿಂಗಾರಿ' ಚಿತ್ರದ ಕಲೆಕ್ಷನ್ ಎಷ್ಟಾಗಿದೆ ಅಂತ ಹೇಳಿದ್ದಾರೆ" ಎಂದಿದ್ದಾರೆ.

ಇದೀಗ ಚಿಂಗಾರಿ ಚಿತ್ರದಿಂದ ಸಾಕಷ್ಟು ಲಾಭ ಮಾಡಿಕೊಂಡಿರುವ ಪ್ರಸಾದ್, ಅಣ್ಣಾ ಬಾಂಡ್ ಕೂಡ ಖರೀದಿಸಿರುವುದು ನಿಮಗೆ ನಿಮಪಿರಬಹುದು. ಈ ನಡುವೆ ವಿತರಕ ಪ್ರಸಾದ್, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಎರಡು ತೆಲುಗು ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್ ಮಾಡಲಿದ್ದಾರೆ. ಒಟ್ಟಿನಲ್ಲಿ ಕನ್ನಡಕ್ಕೊಬ್ಬ ಸಜ್ಜನ, ಗ್ರೇಟ್ ವಿತರಕರು ಪ್ರಸಾದ್ ಎಂಬ ಹೆಸರಿನ ಮೂಲಕ ಸಿಕ್ಕಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Challenging Star Darshan movie Chingari collected more than Rs. 6 Crore in the Box Office. Darshan told this the first person informed me the collection of the movie, is this Samarth Ventures Prasad. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X