ನಟ ದರ್ಶನ್ ವಿಜಯಯಾತ್ರೆಗೆ ಬಿತ್ತು ಭರ್ಜರಿ ಬ್ರೇಕ್

ಶೇಷಾದ್ರಿಪುರಂನ ವಕೀಲ ಆರ್ ಎಲ್ ಎನ್ ಮೂರ್ತಿ ಅವರು ತಮ್ಮ ಪತ್ರವನ್ನು ಹೋಂ ಸೆಕ್ರೇಟರಿ, ಡಿಜಿಪಿ ಹಾಗೂ ನಗರ ಪೊಲೀಸ್ ಕಮೀಷನರ್ ಅವರಿಗೆ ಕಳುಹಿಸಿದ್ದಾರೆ. ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವ ನಟ ದರ್ಶನ್ ಅವರ ರೋಡ್ ಶೋಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
"ದರ್ಶನ್ ಅವರನ್ನು ಬಂಧಿಸಿದಾಗ ಅವರ ಅಭಿಮಾನಿಗಳು ವಿಜಯನಗರ ಪೊಲೀಸ್ ಠಾಣೆ ಮುಂದೆ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಇದನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್‌ನಲ್ಲಿ ನಡೆಯುತ್ತಿರುವ ಅವರ ಕೇಸ್ ವಿಚಾರಣೆ ಮುಗಿಯುವವರೆಗೂ ಅವಕಾಶ ನೀಡಬಾರದು" ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಾದ್ಯಂತ ದರ್ಶನ್ ವಿಜಯಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ. ಸಮಾಜಕ್ಕೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದಿದ್ದಾರೆ ಮೂರ್ತಿ. ಪತ್ರ ನಮ್ಮ ಕೈಸೇರಿದೆ. ಆದರೆ ಅದರಲ್ಲಿನ ವಿವರಗಳು ಇನ್ನಷ್ಟೆ ತಿಳಿದುಕೊಳ್ಳಬೇಕಾಗಿದೆ. ಆ ಬಳಿಕವಷ್ಟೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ನಗರ ಪೊಲೀಸ್ ಕಮೀಷನರ್ ಬಿ ಜಿ ಜ್ಯೋತಿಪ್ರಕಾಶ್ ಮಿರ್ಜಿ. (ಏಜೆನ್ಸೀಸ್)


Click it and Unblock the Notifications











