twitter
    For Quick Alerts
    ALLOW NOTIFICATIONS  
    For Daily Alerts

    ಕೇಸರಿ ಹರವೂ ಈಗೇನು ಮಾಡುತ್ತಿದ್ದಾರೆ?

    By Staff
    |

    *ಮಹೇಶ್ ಮಲ್ನಾಡ್

    Kesari Haravoo back again with DeJaGow
    ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದ ನಿರ್ದೇಶಕ ಕೇಸರಿ ಹರವೂ ಅವರು, ಪ್ರಸ್ತುತ ಯಾವ ಯೋಜನೆಯಲ್ಲಿದ್ದಾರೆ ಎಂಬ ಪ್ರಶ್ನೆ ಹಾಕಿಕೊಂಡು ಹುಡುಕಿದಾಗ ಅವರು ಸಿಕ್ಕಿದ್ದು ಮೈಸೂರಿನಲ್ಲಿ. ಕಳೆದ ಸಾಲಿನ ಚಲನಚಿತ್ರಗಳನ್ನು ವೀಕ್ಷಿಸಿ, ಸಮರ್ಥವಾಗಿ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಕೀರ್ತಿ/ಅಪಕೀರ್ತಿಯನ್ನು ಕೇಸರಿ ಅವರ ನೇತೃತ್ವದ ಸಮಿತಿ ಹೊತ್ತು ಕೊಂಡಿತ್ತು.

    ಕೆಲ ಆಪ್ತ ಸ್ನೇಹಿತರಿಂದಲೇ ಕೇಸರಿ ಅವರ ಆಯ್ಕೆ ಮಾನದಂಡದ ಬಗ್ಗೆ ಅಪಸ್ವರ ಕೇಳಿ ಬಂದಾಗ ಮಾನಸಿಕವಾಗಿ ಘಾಸಿಗೊಂಡಿದ್ದರು.ಟೀಕೆ ಟಿಪ್ಪಣಿಗಳಿಗೆ ಸೊಪ್ಪುಹಾಕದಿದ್ದರೂ ಕೇಸರಿ ಅವರು ಆಯ್ಕೆ ಸಮಿತಿ ಅಧ್ಯಕ್ಷ ಎಂದು ಗೊತ್ತಾದ ದಿನದಿಂದ ಬಂದ ಫೋನ್ ಕಾಲ್ ಗಳು, ಸಂದೇಶಗಳ ಬಗ್ಗೆ ನಕ್ಕು ನುಡಿಯುತ್ತಿದ್ದರು. ಉತ್ತಮ ಚಿತ್ರ ತೆಗೆಯುವ ಗೋಜಿಗೆ ಹೋಗದ ನಮ್ಮ ಜನ, ಉತ್ತಮ ರೀತಿಯಲ್ಲಿ ಪುಸಲಾಯಿಸುವುದನ್ನಂತೂ ಕಲಿತ್ತಿದ್ದಾರೆ. ಆಯ್ಕೆ ಪಟ್ಟಿ ರಿಲೀಸ್ ಮಾಡೊ ಎರಡು ಮೂರು ದಿನವಂತೂ ನನಗೆ ಬಂದ ಫೋ ನ್ ಕಾಲ್ ಗಳ ಸಂಖ್ಯೆಗೆ ಲೆಕ್ಕವಿಲ್ಲ. ಬಿಡಿ ಅದು ಮುಗಿದ ಕಥೆ ಅಂದರು.

    ಸರಿ , ಸಾರ್ ಈಗ ಯಾವ ಯೋಜನೆಯಲ್ಲಿ ತೊಡಗಿದ್ದೀರಾ ಎಂದರೆ, ಸದ್ಯ ಸಾಹಿತಿ ದೇ ಜವರೇಗೌಡ ಅವರ ಬದುಕು-ಬರಹ ಕುರಿತ ಸಾಕ್ಷ್ಯಚಿತ್ರವನ್ನು ಚಿತ್ರೀಸುತ್ತಿದ್ದೇವೆ ಎಂದರು. ಮೈಸೂರಿನ ದೇಜಗೌ ನಿವಾಸದಲ್ಲಿ ನಿರ್ದೇಶಕ ಹರವೂ, ಸಹ ನಿರ್ದೇಶಕ ಕವೀಶ್ ಶೃಂಗೇರಿ ಅವರನ್ನು ಒಳಗೊಂಡ ತಂಡಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶನಿವಾರ ತನಕ ದೇಜಗೌ ಅವರ ಮನೆ, ಕಾಲೇಜು, ಅವರ ಪರಿಸರದ ಚಿತ್ರಣವನ್ನು ಸೆರೆಹಿಡಿದುಕೊಂಡು, ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಂದಿನ ಚಿತ್ರೀಕರಣ ಮಾಡಲಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯ ಪ್ರಯೋಜಕತ್ವದ ಈ ಯೋಜನೆಯಲ್ಲಿ ಸಾಹಿತಿಗಳ ಪೂರ್ಣ ಪರಿಚಯಾತ್ಮಕ ಚಿತ್ರಣ ದೊರೆಯಲಿದೆ ಎಂದರು ಕೇಸರಿ ಅವರ ಸಹಾಯಕ ಕವೀಶ್.

    ಕೇಸರಿ ಅವರು ಭೂಮೀಗೀತ ಚಲನಚಿತ್ರದ ನಂತರ ಅಘನಾಶಿನಿ, ಸರೋಜಿನಿ,ಮುಂತಾದ ಸಾಕ್ಷ್ಯಚಿತ್ರಗಳನ್ನು ರೂಪಿಸಿದ್ದಾರೆ.ಬಿ. ವಿಜಯ್ ರೆಡ್ಡಿ, ಡಿ .ರಾಜೇಂದ್ರ ಬಾಬು ಹಾಗೂ ವಿ. ರವಿಚಂದ್ರನ್ ಮುಂತಾದ ಹಿರಿಯ ನಿರ್ದೇಶಕರ ಜೊತೆ ಚಿತ್ರಕಥೆಗಾರರಾಗಿ, ಸಹಾಯಕರಾಗಿ ಹರವೂ ಅವರು ದುಡಿದಿದ್ದಾರೆ.

    ಪೂರಕ ಓದಿಗೆ

    ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ
    ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ 2007-08

    Tuesday, February 17, 2009, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X