ಸಾಹಸಸಿಂಹ ವಿಷ್ಣು ಅಭಿಮಾನಿಗಳ ಪಾದಯಾತ್ರೆ
ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರನ್ನು ಅಗಲಿ ಡಿಸೆಂಬರ್ 30ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್30ರಂದು ಮೌನ ಮೆರವಣಿಗೆಯ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿಷ್ಣುಪ್ರಿಯರು ಸಿಂಹಜ್ಯೋತಿಯೊಂದಿಗೆ ಮೌನ ಮೆರವಣಿಗೆಯಲ್ಲಿ ಭಕ್ತಿ ಭಾವಗಳೊಂದಿಗೆ ಪಾಲ್ಗೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.
ಮೌನ ಮೆರವಣಿಗೆಯ ಪಾದಯಾತ್ರೆಯು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಅಭಿಮಾನ್ ಸ್ಟುಡಿಯೋ ವರೆಗೆ ಸಾಗಲಿದೆ. ಡಿಸೆಂಬರ್ 30, 2010ರಂದು ಗುರುವಾರ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
ಈ ಮೌನ ಮೆರವಣಿಗೆಯನ್ನು ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ವಿಶ್ವ ಮಹಾ ಸಂಘ ಹಮ್ಮಿಕೊಂಡಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು ಶ್ವೇತಬಣ್ಣದ ವಸ್ತ್ರಗಳನ್ನು ತೊಟ್ಟು ಬರಬೇಕೆಂದು ಸೂಚಿಸಲಾಗಿದೆ.
More from Filmibeat
English summary
Dr Vishnuvardhana fans are taking a silent procession from National College grounds in Basavanagudi to Abhiman Studio on 30th December, 2010. The white costume dress code has been prescribed for the fans.
ವಿಷ್ಣುವರ್ಧನ್ ಸಾಹಸಸಿಂಹ ಪಾದಯಾತ್ರೆ ಆಪ್ತರಕ್ಷಕ ಆಪ್ತಮಿತ್ರ ನ್ಯಾಷನಲ್ ಕಾಲೇಜು ಅಭಿಮಾನಿಗಳು vishnuvardhan sahasa simha procession aptharakshaka national college aptha mitra


Click it and Unblock the Notifications











