»   » ಕನಸಿನ ಕನ್ಯೆ ಹೇಮಾಮಾಲಿನಿಗೆ ಆಗಲೇ ಅರುವತ್ತಾ!

ಕನಸಿನ ಕನ್ಯೆ ಹೇಮಾಮಾಲಿನಿಗೆ ಆಗಲೇ ಅರುವತ್ತಾ!

Posted By:
Subscribe to Filmibeat Kannada

ತಿರುಪತಿ, ಅ. 17 : ಚಿತ್ರ ಪ್ರೇಮಿಗಳ ಕನಸಿನ ಕನ್ಯೆ, ರಾಜ್ಯಸಭಾ ಸದಸ್ಯೆ, ಭರತನಾಟ್ಯ ಕಲಾವಿದೆ ಹೇಮಾ ಮಾಲಿನಿ ಬುಧವಾರ ತಮ್ಮ 60 ನೆ ಹುಟ್ಟು ಹಬ್ಬವನ್ನು ತಿಮ್ಮಪ್ಪನ ಸನ್ನಿಧಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡರು. ಇಬ್ಬರು ಹೆಣ್ಣುಮಕ್ಕಳಾದ ಇಷಾ ಡಿಯೋಲ್ ಮತ್ತು ಅಹನಾ ಡಿಯೋಲ್ ಸಮೇತ ದೇಗುಳಕ್ಕೆ ಆಗಮಿಸಿದ್ದ ಅವರು ಬಾಲಾಜಿಯ ದರ್ಶನ ಮಾಡಿದರು. ವಿಐಪಿಗಳಿಗೆ ಮೀಸಲಾದ ದರ್ಶನ ಅವಧಿಯಲ್ಲಿ ಅವರು ವೆಂಕಟರಮಣನಿಗೆ ನಮಿಸಿದರು.

ದರ್ಶನದ ನಂತರ ದೇಗುಳದ ಅರ್ಚಕರು ಆಕೆಗೆ ಶ್ರೀವಾರಿ ಪ್ರಸಾದ ವಿನಿಯೋಗ ಮಾಡಿದರು ಎಂದು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ವರ್ಗದವರು ತಿಳಿಸಿದರು. ಚಲನಚಿತ್ರ ಕಲಾವಿದರು, ಪ್ರಸಿದ್ದಿ ಪುರುಷರು ತಮ್ಮ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಿಕೊಳ್ಳುವುದು ರೂಢಿ. ಮನೆಯಲ್ಲಿ ಒಂದು ತರಹ, ಸ್ಟೂಡಿಯೋದಲ್ಲಿ ಒಂದು ತರಹ, ಆಹ್ವಾನಿತರು ಮತ್ತು ಗಣ್ಯರ ಸಮ್ಮುಖದಲ್ಲಿ ಇನ್ನೊಂದು ತರಹ. ಇವೆಲ್ಲದರ ಜತೆಗೆ ಹುಟ್ಟು ಹಬ್ಬದ ದಿವಸ ಅಥವಾ ಹುಟ್ಟುಹಬ್ಬದ ವಾರದಲ್ಲಿ ತಿರುಪತಿಗೆ ಅಥವಾ ತಮ್ಮ ಮನೆ- ಇಷ್ಟದೇವರ ಗುಡಿಗೆ ತೆರಳಿ ಹಣ್ಣು ಕಾಯಿ ಮಾಡಿಸುವುದು ಅವರವರ ಭಕ್ತಿಗೆ ದ್ಯೋತಕ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada