»   » ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ

ಮತ್ತೊಂದು ದುನಿಯಾದ ನಿರೀಕ್ಷೆಯಲ್ಲಿ ಸೂರಿ

Posted By:
Subscribe to Filmibeat Kannada

ಸಾಕಷ್ಟು ದಿನಗಳ ಗ್ಯಾಪ್‌ನ ನಂತರ ನಿರ್ದೇಶಕ ಸೂರಿ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಜಂಗ್ಲಿ' ಅಂಥ. ಇದೇನಿದು ಒಳ್ಳೆ ಹಿಂದಿ ಚಿತ್ರದ ಟೈಟಲ್ ತರಹ ಇದೆ ಎಂದುಕೊಳ್ಳುವವರಿಗೆ ಸೂರಿ ಮತ್ತೊಂದು ಶಾಕ್ ನೀಡಿದ್ದಾರೆ. 'ದುನಿಯಾ' ಚಿತ್ರದ ನಟ ವಿಜಯ್ ಹಾಗೂ ಛಾಯಾಗ್ರಾಹಕ ಸತ್ಯ ಹೆಗ್ಡೆಯನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗಲಿದೆ. ಜಂಗ್ಲಿ ಚಿತ್ರಕ್ಕಾಗಿ ಸೂರಿ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ.

'ಇಂತಿ ನಿನ್ನ ಪ್ರೀತಿಯ' ಸೋಲಿನಿಂದ ಕಂಗೆಟ್ಟಿರುವ ಸೂರಿ ಹಾಗೂ 'ಚಂಡ', 'ಯುಗ' ಚಿತ್ರಗಳಿಂದ ಹೈರಾಣಾಗಿರುವ ವಿಜಯ್ ಬ್ರೇಕ್‌ಗಾಗಿ ಕಾಯುತ್ತಿದ್ದರು. ಯಾವುದಕ್ಕೂ ಕಾಲ ಕೂಡಿ ಬರಬೇಕು. ವಿಜಯ್ ನಟಿಸಿದ 'ಮುಖ್ಯಮಂತ್ರಿ ಐ ಲವ್ ಯು', 'ಪುಟ್ಟ' ಹಾಗೂ 'ಸ್ಲಂ ಬಾಲ' ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಸೂರಿಯ 'ಜಂಗ್ಲಿ' ಚಿತ್ರವನ್ನು ಹೊರತುಪಡಿಸಿದರೆ ವಿಜಯ್ ಕೈಯಲ್ಲಿ ಯಾವುದೇ ಚಿತ್ರ ಇಲ್ಲ.ಇನ್ನು ಛಾಯಾಗ್ರಾಹಕ ಸತ್ಯ ಹೆಗ್ಡೆ 'ಅಂಬಾರಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 25 ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡು ಸೂರಿ ಚಿತ್ರತಂಡವನ್ನು ಸೇರಲಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮ್ಯಾ ಜೋಡಿಯ 'ಬೊಂಬಾಟ್' ಚಿತ್ರದ ಚಿತ್ರೀಕರಣ ಮುಗಿದಿದೆ. ಅದರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖುಷಿಯಾಗಿದ್ದಾರೆ. ಇದಾದ ಅವರು ನಂತರ 'ಜಂಗ್ಲಿ'ಚಿತ್ರದ ಕಡೆ ಗಮನ ಹರಿಸಲಿದ್ದಾರೆ. ಈ ಮಧ್ಯೆ ರಾಕ್‌ಲೈನ್ ವೆಂಕಟೇಶ್, ಸುದೀಪ್ ಹಾಗೂ ದೊಡ್ಡಣ್ಣ ನಟನೆಯ 'ಕಾಮಣ್ಣನ ಮಕ್ಕಳು' ಜೂನ್.20ರಂದು ತೆರೆಕಾಣಲಿದೆ. ನಿರ್ದೇಶಕ ಸೂರಿ ಈ ಬಾರಿ ಎಡವದಂತೆ ಜಾಗ್ರತೆವಹಿಸಿದ್ದಾರೆ. ಪಕ್ಕಾ ಚಿತ್ರಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಟೈಟಲ್‌ಗೆ ಹೊಂದುವ ನಟನನ್ನು ಹುಡುಕಿದ್ದಾರೆ. ಕ್ಯಾಮೆರಾ ಹಿಂದೆ ಸತ್ಯ ಹೆಗ್ಡೆ ಇದ್ದಾರೆ. ಇವರೆಲ್ಲರ ಬೆನ್ನಿಗೆ ರಾಕ್‌ಲೈನ್ ವೆಂಕಟೇಶ್ ಇದ್ದಾರೆ. ದುನಿಯಾ ದಿನಗಳು ಮತ್ತೆ ಮರುಕಳಿಸುತ್ತವಾ? ಕಾಲಾಯ ತಸ್ಮೈ ನಮಃ!

(ದಟ್ಸ್‌ಕನ್ನಡ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X