ಜೆ ಪಿ ನಗರದ ಪಕ್ಕಾ ವಾಸ್ತು ಮನೆಗೆ ನಟ ಗಣೇಶ್ ಶಿಫ್ಟ್
ಗೋಲ್ಡನ್ ಸ್ಟಾರ್ ಗಣೇಶ್ ಅಡ್ರಸ್ ಈಗ ಬದಲಾಗಿದೆ. ಹೆಂಡತಿ ಮಕ್ಕಳ ಜೊತೆ ಬನಶಂಕರಿಯಲ್ಲಿ ವಾಸವಾಗಿದ್ದ ಗಣೇಶ್ ಈಗ ಜೆ ಪಿ ನಗರಕ್ಕೆ ಶಿಫ್ಟ್ ಆಗಿದ್ದಾರೆ. ಈಗದು ಇಂಡಿಪೆಂಡೆಂಟ್ ಹೌಸ್. ಮನೆ ಪಕ್ಕಾ ವಾಸ್ತುವಿನಿಂದ ಕೂಡಿದ್ದು ಬಾಡಿಗೆ ತಿಂಗಳಿಗೆ ರು.75,000 ಅಂತೆ!
ಅವರ ಇತ್ತೀಚಿನ "ಕೂಲ್ ಸಖತ್ ಹಾಟ್ ಮಗಾ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ್ದೆ ಈ ಬದಲಾವಣೆಗೆ ಕಾರಣ ಎನ್ನುತ್ತಿವೆ ಗಾಂಧಿನಗರ ಮೂಲಗಳು. ಶಿಲ್ಪಾರನ್ನು ಮದುವೆಯಾದ ಬಳಿಕ ಗಣೇಶ್ ಬನಶಂಕರಿಯ ಮನೆಯಲ್ಲಿ ವಾಸವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅದೇ ಮನೆಯಲ್ಲಿದ್ದರು.
ಈಗಿರುವ ಮನೆಗೆ ವಾಸ್ತು ಸರಿಯಿಲ್ಲ. ಮನೆ ಬದಲಾಯಿಸದಿದ್ದರೆ ಸೋಲು ತಪ್ಪಿದ್ದಲ್ಲ ಎಂದು ಯಾರೋ ಜ್ಯೋತಿಷಿ ಗಣೇಶ್‌ಗೆ ಸಲಹೆ ನೀಡಿದ್ದರಂತೆ. ಅದಕ್ಕಾಗಿ ಜೆ ಪಿ ನಗರಕ್ಕೆ ಗಣೇಶ್ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಎಸ್ ನಾರಾಯಣ್ ನಿರ್ದೇಶನದಲ್ಲಿ 'ಶೈಲೂ' ಚಿತ್ರದಲ್ಲಿ ಗಣೇಶ್ ಅಭಿನಯಿಸುತ್ತಿದ್ದಾರೆ. ಈ ಹಿಂದೊಮ್ಮೆ ಗಣೇಶ್‌ಗೆ ಗಂಡಾಂತರವಂತೆ ಎಂಬ ಸುದ್ದಿ ಇತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











