ಹಂಸಿಕಾ ಮೋತ್ವಾನಿಗೆ ರು.1.2 ಕೋಟಿ ಲಾಟರಿ!
ಕನ್ನಡದ 'ಬಿಂದಾಸ್' ಚಿತ್ರದಲ್ಲಿ ಮಿಂಚಿದ್ದ ಬಳುಕುವ ಬಳ್ಳಿ ಹಂಸಿಕಾ ಮೋತ್ವಾನಿನಿಗೆ ರು.1.2 ಕೋಟಿ ಲಾಟರಿ ಹೊಡೆದಿದೆ. ಹನ್ಸಿ ಯಾವಾಗ ಲಾಟರಿ ತಗೊಂಡರು. ಅದು ಸ್ಟೇಟ್ ಲಾಟರೀನಾ ಅಥವಾ ಆನ್‌ಲೈನ್ ಲಾಟರಿ ಎಂಬ ಅನುಮಾನಗಳಿಗೆ ಬ್ರೇಕ್ ಹಾಕಿದರೆ, ನೇರವಾಗಿ ವಿಷಯಕ್ಕೆ ಬರಬಹುದು.
ಹಾಲಿನಂಥ ದೇಹಸಿರಿಯಳ್ಳು ಈಕೆಗೆ ಐಟಂ ಸಾಂಗ್ ಒಂದಕ್ಕಾಗಿ ರು.1.2 ಕೋಟಿ ಕೊಟ್ಟಿ ಆಫರ್ ಮಡಗಿದ್ದಾರೆ ನಿರ್ಮಾಪಕರು. ಇದು ಈಕೆಗೆ ತಮಿಳು ಚಿತ್ರರಂಗದಲ್ಲಿ ಹೊಡೆದ ಅತಿದೊಡ್ಡ ಲಾಟರಿ! ಅದು ಪ್ರತಿಭಾನ್ವಿತ ನಟ ವಿಕ್ರಂ ಚಿತ್ರದಲ್ಲಿ ಈ ಚಾನ್ಸ್ ಹೊಡೆದಿರುವುದು ವಿಶೇಷ.
ಚಿತ್ರದಲ್ಲಿ ಹಂಸಿಕಾ ಐಟಂ ಸಾಂಗ್‌ಗೆ ಅಷ್ಟೇ ಸೀಮಿತವಂತೆ. ಉಳಿದಂತೆ ಚಿತ್ರದ ಹೀರೋಯಿನ್ ದೀಕ್ಷಾ ಸೇಠ್. ರೆಗ್ಯುಲರ್ ಐಟಂ ಸಾಂಗ್‌ಗಳಿಗಿಂತ ಈ ಸಾಂಗ್ ತೀರಾ ಭಿನ್ನವಾಗಿರುತ್ತದಂತೆ. ಅದು ಹೇಗಿರುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿದರೇನೆ ಗೊತ್ತಾಗುತ್ತದೆ ಎನ್ನುತ್ತಿದೆ ಚಿತ್ರತಂಡ.
ಹಂಸಿಕಾ ಅವರಿಗೇನೋ ಲಾಟರಿ ಹೊಡೆದಿದೆ. ಆದರೆ ದುರಂತ ಎಂದರೆ ಬಲಗೈಗೆ ಬಂದ ಲಕ್ಷ್ಮಿಯನ್ನು ಎಡಗೈಯಲ್ಲಿ ಪಕ್ಕಕ್ಕೆ ತಳ್ಳಿದ್ದಾರೆ ಹನ್ಸಿಕಾ. ಎಷ್ಟೇ ದುಡ್ಡು ಕೊಟ್ಟರೂ ಬಟ್ಟೆ ಬಿಚ್ಚಲು ನಾ ಒಲ್ಲೆ ಎಂದಿದ್ದಾರೆ ಹನ್ಸಿಕಾ. ಒಳ್ಳೆ ಪಾತ್ರಕ್ಕಾಗಿಯೇ ತಮ್ಮ ದೇಹ ಇರುವುದು ಎಂದು ಕಡಕ್ ಆಗಿ ನುಡಿದಿದ್ದಾರಂತೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











