ನಟಿ ಅನುಷ್ಕಾ ಶೆಟ್ಟಿ ನಿವಾಸದ ಮೇಲೆ ಐಟಿ ದಾಳಿ

By Rajendra

ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಅವರ ಹೈದರಾಬಾದ್ ಜುಬಿಲಿ ಹಿಲ್ಸ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬುಧವಾರ (ನ.16) ಮಧ್ಯಾಹ್ನ ದಾಳಿ ನಡೆಸಿದರು. ಅನುಷ್ಕಾ ಅವರಿಗೆ ಸೇರಿದ ನಗದು, ಬ್ಯಾಂಕ್ ಪಾಸ್‌ ಪುಸ್ತಕಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿಯ ಐಶಾರಾಮಿ ವುಡ್ಸ್ ಅಪಾರ್ಟ್‌ಮೆಂಟ್‌ ಆರು ಮಹಡಿಗಳನ್ನು ಒಳಗೊಂಡಿದೆ. ಸರಿಸುಮಾರು ಮಧ್ಯಾಹ್ನ 2ಗಂಟೆ ವೇಳೆಯಲ್ಲಿ ಐಟಿ ದಾಳಿ ನಡೆದಿದೆ. ಒಂದು ಗಂಟೆಗೂ ಅಧಿಕ ಕಾಲ ಐಟಿ ಅಧಿಕಾರಿಗಳು ಬಂಗಲೆಯನ್ನು ಜಾಲಾಡಿದ್ದಾರೆ. ದಾಳಿ ನಡೆದಾಗ ಅನುಷ್ಕಾ ಹಾಗೂ ಆಕೆಯ ತಾಯಿ ಮನೆಯಲ್ಲೇ ಇದ್ದರು.

ಈ ಹಿಂದೊಮ್ಮೆ ಅನುಷ್ಕಾ ಮನೆಯ ಮೇಲೆ ಐಟಿ ದಾಳಿ ನಡೆದಿದ್ದು. ಈಗ ಎರಡನೆ ಬಾರಿ ಐಟಿ ದಾಳಿ ನಡೆದಿದೆ. ಈ ಬಗ್ಗೆ ಅನುಷ್ಕಾ ಅವರ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ ಅವರು ಐಟಿ ದಾಳಿಯನ್ನು ನಿರಾಕರಿಸಿದ್ದಾರೆ. ದಾಳಿ ನಡೆದದ್ದು ಅನುಷ್ಕಾ ಮನೆಯ ಮೇಲಲ್ಲ, ಆಕೆಯ ಪಕ್ಕದ ಮನೆಯ ಮೇಲೆ ಎಂದಿದ್ದಾನೆ. ಆದರೆ ಐಟಿ ಮೂಲಗಳು ದಾಳಿ ನಡೆದಿರುವುದು ಅನುಷ್ಕಾ ಮನೆಯ ಮೇಲೆ ಎಂದಿವೆ. (ಏಜೆನ್ಸೀಸ್)

More from Filmibeat

English summary
Gorgeous Anushka Shetty has come under the scanner of Income Tax (I-T) department once again. In less than eight months, her house has been raided by the I-T sleuths second time on Wednesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X