For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್‌ಗೆ ಬರ್ತ್‌ಡೇ...ಐತೇರಿ ಲಕಡಿ ಪಕಡಿ ಜುಮ್ಮಾ

  By Rajendra
  |

  ಸ್ಯಾಂಡಲ್‌ವುಡ್‌ನಲ್ಲಿ ಶನಿವಾರ (ಮಾ.17) ಸ್ಟಾರ್ ಬರ್ತ್‌ಡೇಗಳ ಸಂಭ್ರಮ,ಸಡಗರ. ಬರ್ತ್‌ಡೇ ಬಾಯ್ ಜಗ್ಗೇಶ್ ಅವರು ಇಂದು 48ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಸಂಸ್ಕೃತಿ, ಸಂಪ್ರದಾಯಕ್ಕೆ ಶಿರಬಾಗುವ ಜಗ್ಗೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಮಲ್ಲೇಶ್ವರಂನ ತಮ್ಮ ನಿವಾಸದಲ್ಲೇ ಕುಟುಂಬಿಕರೊಂದಿಗೆ ಆಚರಿಸಿಕೊಂಡಿದ್ದಾರೆ.

  ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಮುಂಜಾನೆಯೇ ಪೂಜೆ ಸಲ್ಲಿಸಿ ತಮ್ಮ ಹುಟ್ಟುಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡರು. ಸದ್ಯಕ್ಕೆ ಕೈಯಲ್ಲಿ ಬಾಟಲಿ ಹಿಡಿರುವ ಜಗ್ಗೇಶ್ ಅವರು "ಬನ್ನಿ ನಿಮಗೂ ಹಾಕಸ್ತಿನಿ" ಎಂದಿದ್ದಾರೆ! ಆದರೆ ಹಾಗೆ ಅವರು ಕರೆದಿರುವುದು ಮಂಜುನಾಥ ಬಿಎ ಎಲ್‌ಎಲ್‌ಬಿ ಚಿತ್ರದ ಪೋಸ್ಟರ್‌ನಲ್ಲಿ.

  ಏತನ್ಮಧ್ಯೆ ಜಗ್ಗೇಶ್ ಅವರು ಕಿರುತೆರೆಗೆ ಅಡಿಯಿಟ್ಟಿದ್ದಾರೆ. ಉದಯ ಟಿವಿಯ ರಿಯಾಲಿಟಿ ಶೋ 'ಕೈಯಲ್ಲಿ ಕೋಟಿ' ನಡೆಸಿಕೊಡಲು ವೀಕ್ಷಕರ ಮುಂದೆ ಬರುತ್ತಿದ್ದಾರೆ. ಐತೇರಿ ಲಕಡಿ ಪಕಡಿ ಜುಮ್ಮಾ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. (ಒನ್‌ಇಂಡಿಯಾ ಕನ್ನಡ)

  English summary
  Navarasa Nayaka Jaggesh celebrates his 48th birthday on 17th March 2012. He celebrated his birthday with his family members at Malleswaram residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X