ಬ್ಯಾಂಕಾಕ್ನಲ್ಲಿ 'ತೀರ್ಥ';ಬೇಗ ಬರಲಿದೆ ಜಾಲಿಡೇಸ್

By Staff

ತಮ್ಮ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಬೇಕೆಂಬ ಇರಾದೆ ಇರುವ ನಿರ್ಮಾಪಕರಿಗೆ ಹೆಚ್ಚು ಹೊರೆಯಾಗದ ಸೂಕ್ತ ಸ್ಥಳ ಬ್ಯಾಂಕಾಕ್. ಹಾಗಾಗಿ ಕನ್ನಡದ ಬಹುತೇಕ ಚಿತ್ರಗಳು ಈ ಭೋಗಭೂಮಿಯಲ್ಲಿ ಚಿತ್ರೀಕೃತವಾಗುತ್ತಿದೆ. ಪ್ರಸ್ತ ಪವನ್ ಆರ್ಟ್ಸ್ ಲಾಂಛನದಲ್ಲಿ ಶ್ರೀರಾಮ್, ಗೋಪಿ ಹಾಗೂ ಕುಮಾರ್ ನಿರ್ಮಿಸುತ್ತಿರುವ ತೀರ್ಥ ಚಿತ್ರದ ಮೂರು ಹಾಡುಗಳು ಬ್ಯಾಂಕಾಕ್‌ನಲ್ಲಿ ಚಿತ್ರೀಕೃತವಾಗಿದೆ. 12ದಿವಸಗಳ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ 24ಜನರ ತಂಡ ಪ್ರಯಾಣ ಬೆಳೆಸಿದೆ.

ಅಲ್ಲಿ ಸುದೀಪ್ ಹಾಗೂ ಸಲೋನಿ ಅಭಿನಯದಲ್ಲಿ' ಕಿಚ್ಚಕಿಚ್ಚ ಹುಚ್ಚಹುಚ್ಚ, ಮೆಲ್ಲಮೆಮೆಲ್ಲಗೆ ಒಲವೇ ನನ್ನೊಲವೆ' ಹಾಗೂ 'ಓಡೋ ಮೋಡದಲಿ ಹಾಡೊ ಹಾದಿಯಲಿ 'ಎಂಬ ಹಾಡುಗಳನ್ನು ಛಾಯಾಗ್ರಾಹಕ ಚಂದ್ರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಸಾಧುಕೋಕಿಲ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರು ಛಾಯಾಗ್ರಹಣವಿರುವ ಚಿತ್ರದ ತಾರಾ
*****
ಬೇಗ ಬರಲಿದೆ ಜಾಲಿಡೇಸ್

ಯಂಗ್ ಡ್ರೀಮ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾದಿರೆಡ್ಡಿ ಪರಮ್ ನಿರ್ಮಿಸುತ್ತಿರುವ ಮೊದಲ ಚಿತ್ರ ಜಾಲಿಡೇಸ್. ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣಗೊಳ್ಳಿಸಿರುವ ನಿರ್ದೇಶಕ ಎಂ.ಡಿ.ಶ್ರೀಧರ್ ರೇಣು ಸ್ಟೂಡಿಯೋದಲ್ಲಿ ಡಬ್ಬಿಂಗ್ ಹಾಗೂ ರೀರೆಕಾರ್ಡಿಂಗ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದೇ ತಿಂಗಳಲ್ಲಿ ಅದ್ದೂರಿ ಸಮಾರಂಭವನ್ನು ಆಯೋಜಿಸಿ ಆ ಮೂಲಕ ಚಿತ್ರದ ಧ್ವನಿಸುರುಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಇರಾದೆ ನಿರ್ಮಾಪಕರಿಗಿದೆ.

ಹದಿಹರೆಯದ ಹುಡುಗರ ತುಂಟಾಟಗಳ ಸುತ್ತ ಹೆಣೆಯಲಾದ ಈ ಕಥಾನಕಕ್ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಮಿಕ್ಕಿ ಜೆ ಮಯೂರ್ ಸಂಗೀತ, ಸೌಂದರ್‌ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಫೈವ್‌ಸ್ಟಾರ್ ಗಣೇಶ್, ತ್ರಿಭುವನ್, ಇಮ್ರಾನ್ ನೃತ್ಯ, ರಂಗಸ್ವಾಮಿ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ದೀಪು, ವಿಶ್ವಾಸ್, ನಿರಂಜನ್, ಪ್ರವೀಣ್, ಶ್ರೀರಾಮ್, ಐಶ್ವರ್ಯನಾಗ್, ಸ್ಪೂರ್ತಿ, ಕೀರ್ತಿ, ಋತಿಕಾ, ಸುಚೇಂದ್ರಪ್ರಸಾದ್, ಕಿಶೊರಿಬಲ್ಲಾಳ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ರಸಿಕರ ಹೃದಯ ದರೋಡೆಗೆ ಬಂದ ಕೊಂಕಣಿ ಬೆಡಗಿ
ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ
ಸುದೀಪರ'ವೀರ ಮದಕರಿ' ,ಥ್ರಿಲ್ಲರ್ ಗೆ 350

ಗ್ಯಾಲರಿ:
ತೀರ್ಥ ಚಿತ್ರದಲ್ಲಿ ಸುದೀಪ್, ಸಲೋನಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X