»   » ಲಗೋರಿಯಲ್ಲಿ ತಲ್ಲೀನರಾದ ಗಾಳಿಪಟ ಭಟ್

ಲಗೋರಿಯಲ್ಲಿ ತಲ್ಲೀನರಾದ ಗಾಳಿಪಟ ಭಟ್

Subscribe to Filmibeat Kannada

ಮುಂಗಾರು ಮಳೆ ಆರ್ಭಟ ನಿಂತನಂತರ ಗಾಳಿಪಟ ಹಾರಿಸಿದ ಯೋಗರಾಜ್ ಭಟ್ಟರು ಈಗ ಮೈದಾನದಲ್ಲಿ ಲಗೋರಿ ಆಡಲು ಶುರುಮಾಡಿದ್ದಾರ! ಭಟ್ಟರು ಈಗೇನು ಮಾಡುತ್ತಿದ್ದಾರೆ ಅಥವಾ ಏನೋ ನಡೆಸುತ್ತಿದ್ದಾರೆ ಎಂಬ ಕುತೂಹಲ ಕರಗಿ ನೀರಾಗಿದೆ. ರಾಕ್ ಲೈನ್ ವೆಂಕಟೇಶ್ ಅವರಿಗಾಗಿ ಭಟ್ಟರು ನಿರ್ದೇಶಿಸುತ್ತಿರುವ ಚಿತ್ರದ ಹೆಸರು ಲಗೋರಿ.

ಹೊಸ ಚಿತ್ರಕ್ಕೆ ಸದ್ದಿಲ್ಲದೆ ಸಿದ್ಧತೆಮಾಡಿಕೊಂಡಿದ್ದ ಭಟ್ಟರ ಹೊಸ ಪ್ರಾಜೆಕ್ಟ್ ಅಂದುಕೊಂಡಂದಿಕ್ಕಿಂತ ಮೊದಲೇ ಸೆಟ್ಟೇರಲು ಸಜ್ಜಾಗಿದೆ. 120 ದಿವಸಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಯಲಿದ್ದು ಒಂದು ಹದಿನೈದು ದಿವಸ ಅಮೆರಿಕಾದಲ್ಲೂ ಚಿತ್ರೀಕರಣ ನಡೆಯುವುದಕ್ಕೆ ಸಿದ್ಧತೆಗಳು ನಡೆದಿವೆ. ಮನೋ ಮೂರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!

ಮನೋಮೂರ್ತಿಯವರ ಮೂರು ಹಾಡುಗಳು ಈಗಾಗಲೆ ಸಿದ್ಧ. ಇನ್ನು ಮೂರು ಹಾಡುಗಳಿಗೆ ಟ್ರ್ಯಾಕ್ ರೆಡಿಯಾಗಬೇಕಷ್ಟೆ. ಪುನೀತ್ ರಾಜ್ ಕುಮಾರ್ ನಾಯಕತ್ವದಲ್ಲಿ ಮೂಡಿಬರಲಿರುವ ಚಿತ್ರದ ಒಳನೋಟಗಳ ಬಗೆಗೆ ಭಟ್ಟರು ಇನ್ನೂ ಬಾಯಿಬಿಟ್ಟಿಲ್ಲ. ಏನೇ ಅಂದರೂ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕುಂಬಳಕಾಯಿ ನೀರು ಕುಡಿದು ನವಚೇತನ ಗಳಿಸಿಕೊಂಡನಂತರ ಭಟ್ಟರು ಲಗೋರಿ ಆಟದಲ್ಲಿ ತಲ್ಲೀನರಾಗಿರುವುದಂತೂ ನಿಜ.

(ದಟ್ಸ್ ಕನ್ನಡಸಿನಿವಾರ್ತೆ)

ಲಗೋರಿ ಆಡಲು ಬರುವಳೇ ಬೆಡಗಿ ತ್ರಿಷಾ
ಭಟ್ಟರ ಜತೆ ಲಗೋರಿ ಆಡಲಿರುವ ಪುನೀತ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada