ನಾವು ಯಾರಿಗೇನು ಕಮ್ಮಿ ಇಲ್ಲ ಅಂತಾರೆ ಪ್ರೇಮ್
'ನಾವು ಯಾರಿಗೇನು ಕಮ್ಮಿ ಇಲ್ಲ' ಎನ್ನುತ್ತಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್! ಅವರು ಹೀಗೆ ಎನ್ನಲು ಬಲವಾದ ಕಾರಣವೂ ಇದೆ. ಅದೇನಪ್ಪಾ ಅಂದ್ರೆ ಅವರ ಹೊಸ ಚಿತ್ರದ ಹೆಸರೇ ನಾವು ಯಾರಿಗೇನು ಕಮ್ಮಿ ಇಲ್ಲ! 'ಮಿಲನ' ಚಿತ್ರದ ಮೂಲಕ ಪ್ರೇಕ್ಷಕರಹೃದಯಕ್ಕೆ ಲಗ್ಗೆ ಹಾಕಿದ್ದ ಪಾರ್ವತಿ ಚಿತ್ರದ ನಾಯಕಿ.
ಈ ಚಿತ್ರಕ್ಕೆ ವಿಕ್ಟರಿ ವಾಸು ಆಕ್ಷನ್, ಕಟ್ ಹೇಳುತ್ತಿದ್ದಾರೆ. ಇದೊಂದು ನವಿರಾದ ಪ್ರೇಮ ಕಥಾ ಹಂದರದ ಚಿತ್ರವಾಗಿದ್ದು ಲವ್ಲಿ ಸ್ಟಾರ್ ಪ್ರೇಮ್ ನಟನೆ ಲವ್ಲಿಯಾಗೇ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಕ್ಟರಿ ವಾಸು. ಇವರು ಈ ಹಿಂದೆ 'ಗೌಡ Vs ರೆಡ್ಡಿ', 'ವಿಘ್ನ' ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದ್ದಾರೆ.
ನವೆಂಬರ್ 18ರಿಂದ ಚಿತ್ರೀಕರಣ ಆರಂಭವಾಗಲಿದೆ. ರಂಗಾಯಣ ರಘು, ಅನಂತನಾಗ್ ಸಹ ಪಾತ್ರವರ್ಗದಲ್ಲಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ರಾಮ್ ನಾರಾಯಣ್ ಸಂಭಾಷಣೆ, ವಿಷ್ಣುವರ್ಧನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಟೈಟಲ್ ಕೇಳಿದ ಪ್ರೇಕ್ಷಕರು ಸಹ ನೀವು ಯಾರಿಗೇನು ಕಮ್ಮಿ ಇಲ್ಲ ಬಿಡಿ ಸ್ವಾಮಿ ಎನ್ನುತ್ತಿದ್ದಾರೆ.
ಪ್ರೇಮ್ ಲವ್ಲಿ ಸ್ಟಾರ್ ಪ್ರೇಮ್ ನಾವು ಯಾರಿಗೇನು ಕಮ್ಮಿ ಇಲ್ಲ ಪಾರ್ವತಿ ಮೆನನ್ ರಂಗಾಯಣ ರಘು ಅನಂತನಾಗ್ prem lovely star naavu yaarigenu kammi illa parvathi menon anant nag


Click it and Unblock the Notifications