ಪ್ರಿನ್ಸ್ ಮಹೇಶ್ ಬಾಬುಗೆ 'ಮಾಸ್' ಸಿನಿಮಾ ಆಫರ್

ಈ ತೆಲುಗು 'ಪೋಕಿರಿ' ಅಂತಿಂಥವನಲ್ಲಾರರೀ. ವರ್ಷಕ್ಕೋ ಎರಡು ವರ್ಷಕ್ಕೋ ಮಾಡೋದು ಒಂದೇ ಸಿನಿಮಾ. ಆದ್ರೆ ಮುಂದಿನ ಸಿನಿಮಾ ಬರೋ ವರೆಗೂ ಅದರ 'ಹವಾ' ಇರುವಂತೆ ನೋಡಿಕೊಳ್ಳುತ್ತಾರೆ. ಅಥವಾ ಮುಂದಿನ ಸಿನಿಮಾಗೆ ಕಾಯುವಂತೆ ಮಾಡುತ್ತಾರೆ. ಅದು 'ಸೂಪರ್ ಸ್ಟಾರ್' (ಪ್ರಿನ್ಸ್) ಮಹೇಶ್ ಬಾಬು ಮೆಂಟಾಲಿಟಿ, ಈ ಸೌತ್ ಇಂಡಿಯಾ ಸ್ಟಾರ್ ಸ್ಪೆಷಾಲಿಟಿ.

ಈಗ ಮಹೇಶ್ ಬಾಬು ಅಭಿನಯದ 'ದೂಕುಡು' ಸೌತ್ ಇಂಡಿಯಾದಲ್ಲೆಲ್ಲಾ ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಮಹೇಶ್ ಅಭಿಮಾನಿಗಳೆಲ್ಲಾ ಲೆಕ್ಕವಿಲ್ಲದಷ್ಟು ಸಾರಿ ನೋಡಿಯಾಗಿದೆ. ಅವರು ಓಡಿದಂತೆ ಓಡುವ, ಅವರು ನೋಡಿದಂತೆ ನೋಡುವ ಅಭಿಮಾನಿಗಳು ಹಾಗೂ 'ಮಿನಿಸ್ಟಾರ್'ಗಳಿಗೇನೂ ಬರವಿಲ್ಲ. ಮಹೇಶ್ ಬಾಬು ಹೆಸರೆತ್ತದರೂ ಕೆಲವರಿಗೆ ಮಿಂಚಿನ ಸಂಚಾರ.

ಇಂತಪ್ಪ ಮಹೇಶ್ ರನ್ನು 'ಫುಲ್ ಮಾಸ್ ಲುಕ್' ನಲ್ಲಿ ನೋಡುವ 'ಲಕ್' ಸಿಗಲಿದೆ. ಬೋಯಾಪತಿ ಶ್ರೀನು ತಮ್ಮ ಮುಂದಿನ ಸಿನಿಮಾಗೆ ಮಹೇಶ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೂ ಅದು 'ಕಂಪ್ಲೀಟ್ ಮಾಸ್' ಸಿನಿಮಾವಂತೆ. ಜೂ. ಎಂಟಿಆರ್ ಚಿತ್ರ 'ದಮ್ಮು' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶ್ರೀನು, ಮುಂದಿನ ವರ್ಷ ಮಹೇಶ್ ಬಾಬು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಪ್ರೇಕ್ಷಕರು ಈಗಲೇ ಮಹೇಶ್ ಬಾಬು, ರಾ... ರಾ... ಅನ್ನುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
If all goes well, Boyapati Srinu might direct Mahesh Babu's next movie which is likely to be rolled out next year. Boyapati Srinu, who is currently working on Jr NTR's 'Dammu' movie. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X