ಹುಬ್ಬಳ್ಳಿಯ ಹೂಬಳ್ಳಿ ಮಾಧುರಿ-ಇವಳಲ್ಲ ದುಬಾರಿ !

By * ಚಿನ್ಮಯರಾವ್, ಹೊನಗೋಡು

ಈಕೆ ಮಾಧುರಿ ಇಟಗಿ. ಮಾದಕತೆಗೆ ಇನ್ನೊಂದು ಹೆಸರು. ಬಾಲಿವುಡ್‌ನ ಯಾವ ಹೀರೋಇನ್‌ಗಳಿಗೂ ತಾನೆನು ಕಮ್ಮಿ ಇಲ್ಲ ಎಂದು ಇವಳ ಅಂದ...ರಸಿಕರ ಕಂಗಳ ಸೆಳೆಯುವ ನೋಟ. ಫೇಸ್‌ಬುಕ್‌ನಲ್ಲಿ ಈಕೆ ಅಪ್‌ಲೋಡ್ ಮಾಡಿರುವ ಫೋಟೋಗಳನ್ನು ನೋಡಿ ಸ್ವಲ್ಪ ಲೋಡ್ ಹೆಚ್ಚಾದಂತಾಗಿ ಪಡ್ಡೆಹುಡುಗರು ನಿದ್ದೆ ಕೆಡಿಸಿಕೊಂಡಿರುವು ಸುಳ್ಳಲ್ಲ.

ದಿಕ್ಕು ದಿಕ್ಕುಗಳಲ್ಲೂ ಬೇರೆ ಬೇರೆ ರೀತಿ ಕಾಣುತ್ತಿರುವ ಇವಳ ಮೈಮಾಟವನ್ನು ನೋಡಿ ದಿಕ್ಕೇ ತೋಚದಂತಾಗಿ ಮೈಮರೆತಿದ್ದಾರೆ ಇವಳ ಅಭಿಮಾನಿಗಳು. ಅಯ್ಯೋ....ಕನ್ನಡದ ಹುಡುಗಿಯರಿಗೆ ಫೋಟೊಜೆನಿಕ್ ಲುಕ್ ಇಲ್ಲ ಎನ್ನುವ ನಿರ್ದೇಶಕರು ಇವಳನ್ನು ತಮ್ಮ ಮುಂದಿನ ಚಿತ್ರಗಳಿಗೆ ಬುಕ್ ಮಾಡಿ ಲಕ್ ತಿರುಗಿಸಬಾರದೆ? ಎನ್ನುತ್ತಿದ್ದಾರೆ ಇವಳ ಅಂದಾ(ಧಾ)ಭಿಮಾನಿಗಳು!

ಕಾಲೇಜು ಮೆಟ್ಟಿಲು ಹತ್ತಿದ್ದ ಹದಿನೇಳರ ಹರೆಯದ ಮಾಧುರಿಯನ್ನು ಚಿತ್ರರಂಗ ಕೈಬೀಸಿ ಕರೆದದ್ದು ಯಾವಾಗ ಎನ್ನುವಿರಾ? ಮಾಡೆಲಿಂಗ್‌ನಲ್ಲಿ ಬಳುಕುತ್ತಿದ್ದ ಹುಬ್ಬಳ್ಳಿಯ ಈ ಹೂಬಳ್ಳಿ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದಳು. ಕುಮಾರ್ ಗೋವಿಂದ್ ಅವರ "ಸತ್ಯ"ಚಿತ್ರ ಇವಳನ್ನು ನಾಯಕಿಯನ್ನಾಗಿಸಿತು. ಸತ್ಯ ಬಿಡುಗಡೆಯಗಿದ್ದಷ್ಟೇ ಸತ್ಯ!

ಆನಂತರ ಕನ್ನಡದಲ್ಲಿ ನಾಲ್ಕೈದು...ತಮಿಳಿನಲ್ಲಿ ಒಂದೆರಡು (ವಿರುತಗಿರಿ ಹಾಗು ತರಗು) ಚಿತ್ರಗಳಲ್ಲಿ ನಾಯಕಿಯ ರೋಲ್. ಇವಳ ಅಭಿನಯದ ಕನ್ನಡ ಚಿತ್ರಗಳು ತೆನಾಲಿರಾಮ, ಚಿಕ್‌ಪೇಟೆ ಸಾಚಾಗಳು ಹಾಗು ಅಪ್ಪು-ಪಪ್ಪು ಸೂಪರ್ ಹಿಟ್ ಎಂಬುದರಲ್ಲಿ ಎರಡು ಮಾತಿಲ್ಲ.

ಚಿಕ್ ಪೇಟೆ ಸಾಚಾಗಳು ಚಿತ್ರದಲ್ಲಿ ಎಸ್.ನಾರಾಯಣ್ ಅವರ ಪತ್ನಿಯಾಗಿ ಭರ್ಜರಿಯಾಗಿ ನಟಿಸಿದ್ದ ಮಾಧುರಿ ಸೀರೆಯುಟ್ಟು ಗೃಹಿಣಿಯ ಪಾತ್ರದಲ್ಲೂ ಸೈ, ಗ್ಲಾಮರ್‌ನ ಗ್ರಾಮರ್‌ಗೂ ಜೈ, ಉತ್ತಮ ಭಾವಭಿನಯದಲ್ಲೂ ಎತ್ತಿದ ಕೈ !

ಆದಳು "ಮಿಸ್ ಕರ್ನಾಟಕ"-ಈ ವಿಶ್ವ ಕನ್ನಡತಿ: ಇಂತಿಪ್ಪ ಮಾಧುರಿ ಇತ್ತೀಚೆಗಷ್ಟೆ ಪ್ರಖ್ಯಾತ ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ಬೆಂಗಳೂರಿನ ಚೌಡಯ್ಯ ಹಾಲ್‌ನಲ್ಲಿ ನಡೆದ "ಮಿಸ್ ಕರ್ನಾಟಕ" ಕಾಂಟೆಸ್ಟ್‌ನಲ್ಲಿ ವಿನ್ ಆಗಿದ್ದು ಇವಳ ತನುಮನದ ಸೌಂದರ್ಯಕ್ಕೆ ಮತ್ತೊಂದು ಸಾಕ್ಷಿ.

ಅದೇ ಕಾರಣಕ್ಕೆ ಬರುವ ಅಕ್ಟೋಬರ್‌ನಲ್ಲಿ ಲಂಡನ್ ಮಹಾನಗರದಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ "ವಿಶ್ವ ಕನ್ನಡತಿ"ಯಾಗಿ ಮಿಂಚಲಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಸಖತ್ ಸುಂದರಿ ಬಾಲಿವುಡ್‌ನಲ್ಲೂ ಬೆಳಗಿ ಹಾಲಿವುಡ್‌ನಲ್ಲೂ ಹೊಳೆದರೆ ಇವಳ ಅಭಿಮಾನಿಗಳಿಗೆ...ಕನ್ನಡಿಗರಿಗೆ ಖುಷಿ ಅಲ್ಲವೆ?

More from Filmibeat

English summary
Miss Karnataka Madhuri Itagi is already done two three Kannada movies and a Tamil movie. She is ready for glamour roles if the role demands, brief note on her career so far,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X