For Quick Alerts
  ALLOW NOTIFICATIONS  
  For Daily Alerts

  ಜಿಂದಗಿ ಜತೆ ಪಿಸು ಗುಸು ಮೊಗ್ಗಿನ ಮನಸು ತೆರೆಗೆ

  By Staff
  |

  ಮೊಗ್ಗಿನ ಮನಸು
  ಇ.ಕೆ ಎಂಟರ್ ಪ್ರೈಸಸ್ ಅವರ ದ್ವಿತೀಯ ಚಿತ್ರ. ಮುಂಗಾರು ಮಳೆ ಖ್ಯಾತಿಯ ನಿರ್ಮಾಪಕ ಇ.ಕೃಷ್ಣಪ್ಪ ನಿರ್ಮಾಣದ ಮೊಗ್ಗಿನ ಮನಸು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಗರದ ಸಾಗರ್, ಪ್ರಸನ್ನ, ನವರಂಗ್ ಹಾಗೂ ನಳಂದ ಸೇರಿದಂತೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನಾಳೆಯಿಂದ ಮೊಗ್ಗಿನ ಮನಸು ಆರಳಲಿದೆ.

  ಹದಿಹರೆಯದ ಹದಿನಾರರ ವಯಸ್ಸಿನ ಹೆಣ್ಣುಮಕ್ಕಳ ಭಾವನೆಗಳ ಸುತ್ತ ಹೆಣದಿರುವ ವಿಶಿಷ್ಟ ಕಥಾನಕವಿದು. ಈ ಹಿಂದೆ ಸಿಕ್ಸರ್ ಚಿತ್ರವನ್ನು ನಿರ್ದೇಶಿಸಿದ್ದ ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸಿದ್ದು ಮೊಗ್ಗಿನ ಮನಸು ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಚಿತ್ರ ಎಂದಿದ್ದಾರೆ.

  ಜಯಂತಕಾಯ್ಕಿಣಿ ಬರೆದಿರುವ ಸುಂದರ ಗೀತೆಗಳಿಗೆ ಮನೋಮೂರ್ತಿ ಅವರ ಮಧುರ ಸಂಗೀತವಿದೆ. ಸಿರಿಗಂಧದ ತವರಿನ ಪ್ರಕೃತಿ ಸೀಮಂತಿಕೆಯನ್ನು ಮನತಟ್ಟುವಂತೆ ತೋರಿರುವ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಜಿ.ಗಂಗಾಧರ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಕಾಶ್ ಸಂಕಲನ, ಸುಭಾಷ್ ಕಡಕೋಳ್ ಕಲೆ, ಹರ್ಷ, ಚಿನ್ನಿಪ್ರಕಾಶ್ ನೃತ್ಯ, ಕೆ.ಚಂದ್ರು ಮತ್ತು ವೇಣು ಅವರ ಸಹನಿರ್ದೇಶನ, ಪ್ರತಾಪ್‌ರಾವ್ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಧಿಕಾ ಪಂಡಿತ್, ಶುಭಾಪುಂಜಾ, ಸಂಗೀತ ಶೆಟ್ಟಿ, ಮಾನಸಿ, ಸ್ಕಂದ, ಮನೋಜ್, ಜೆ.ಡಿ.ನಾಗರಾಜ್, ಹರ್ಷ, ಯಶ್, ಅವಿನಾಶ್, ಭವ್ಯ, ಅಚ್ಯುತರಾವ್, ಸುಧಾಬೆಳವಾಡಿ, ಮಾ:ಕಿಶನ್, ಜೈಜಗದೀಶ್, ತುಳಸಿ, ಎಚ್.ಜಿ.ಮಹದೇವು ಇದ್ದಾರೆ.  ಜಿಂದಗಿ ಬಿಡುಗಡೆಗೆ
  ಜಿಂದಗಿ ಏಕ್ ಸಫ಼ರ್ ಎಂದರು ಹಿರಿಯರು. ಆದರೆ ಚಿತ್ರಂಗದಲ್ಲಿ ಅದನ್ನು ನಾನಾ ರೀತಿ ಬಿಂಬಿಸಲಾಯಿತು. ಈ ವಾರ ಬಿಡುಗಡೆಯಾಗುತ್ತಿರುವ ಜಿಂದಗಿ ಚಿತ್ರದಲ್ಲಿ ಜೀವನದ ಪಲ್ಲಟಗಳನ್ನು ಹೇಗೆ ಚಿತ್ರೀಕರಿಸಿರಬಹುದು ಎಂದು ಚಿತ್ರರಸಿಕರ ಕೌತುಕ. ಈ ಜಿಂದಗಿ ಅನ್ಕೊಂಡಂಗಲ್ಲ ಮಗಾ ಎನ್ನುತ್ತದೆ ಈ ಚಿತ್ರದ ಅಡಿಬರಹ. ಪ್ರಬುದ್ಧ ನಟ ಕಿಶೋರ್ ಈ ಚಿತ್ರದಲ್ಲಿ ಮತ್ತೆ ಖಾಕಿ ವೇಷಧಾರಿಯಾಗಿ ಮಿಂಚಲಿದ್ದಾರೆ. ಬೆಂಗಳೂರಿನ ಸಂತೋಷ್, ಸಿದ್ಧೇಶ್ವರ, ಬಾಲಾಜಿ ಮುಂತಾದ ಚಿತ್ರಮಂದಿರಗಳಲ್ಲಿ ಜಿಂದಗಿ..ದುನಿಯಾ ಒಂದು...ಜಿಂದಗಿ ಹಲವು ಹೇಗೆ ಎಂಬುದನ್ನು ಕಾಣಬಹುದಾಗಿದೆ.

  ಕಳೆದವರ್ಷ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ದುನಿಯಾ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಎ.ಟಿ.ಲೋಕೇಶ್ ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಮಿಳಿನ ವಿಜಯಕಾಂತ್ ಅವರ ಬಳಿ ಸಹಾಯಕರಾಗಿದ್ದ ಮುಗಿಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಹಂಸಲೇಖ, ಗೋಟುರಿ ಹಾಗೂ ನಾಗೇಂದ್ರಪ್ರಸಾದ್ ರಚಿಸಿರುವ ಗೀತೆಗಳಿಗೆ ಮೈಸೂರ್ ಮೋಹನ್ ಸಂಗೀತ ಸಂಯೋಜಿಸಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹನೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜೀವ್, ಪ್ರಿಯಾಂಕ, ವಿನೂತ, ಕಿಶೋರ್, ಅವಿನಾಶ್, ಮಂಡ್ಯರಮೇಶ್, ಶಾಲಿನಿ, ಮಿತ್ರಾ, ಅರುಣ್ ಮುಂತಾದವರಿದ್ದಾರೆ.

  (ದಟ್ಸ್ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X