For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತರ ಜೊತೆ ನಿಖಿತಾ ತುಕ್ರಲ್ ಡಿಂಗ್ ಡಾಂಗ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ವಿವಾದಗಳಲ್ಲಿ ಸಿಲುಕಿ ಹೈರಾಣಾಗಿದ್ದ ತಾರೆ ನಿಖಿತಾ ತುಕ್ರಲ್ ಇದೀಗ ಮತ್ತೆ ದರ್ಶನ್‌ಗೆ ಜೊತೆಯಾಗಿದ್ದಾರೆ. ದರ್ಶನ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಸ್ನೇಹಿತರು' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

  ಸ್ನೇಹಿತರು ಬಹುತಾರಾಗಣದ ಚಿತ್ರ. ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್ ಹಾಗೂ ರವಿಶಂಕರ್ ಚಿತ್ರದ ನಾಲ್ವರು ನಾಯಕರು. ಈ ನಾಲ್ಕು ಮಂದಿ ನಾಯರ ಜೊತೆ ನಿಖಿತಾ ಐಟಂ ಹಾಡಿರುತ್ತದೆ. "ನಾಯಕಿಯರು ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದರೆ ತಪ್ಪೇನಿಲ್ಲ" ಎಂದಿದ್ದಾರೆ ನಿಖಿತಾ.

  ಈ ಚಿತ್ರದಲ್ಲಿ ಪ್ರಣೀತಾ ನಾಯಕಿ. ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದ್ದು ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ನಿಖಿತಾರ ಐಟಂ ಹಾಡು ಕ್ಲೈಮ್ಯಾಕ್ಸ್‌ಗೂ ಮುನ್ನ ಬರುತ್ತದಂತೆ. ಈ ಹಾಡನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ರಾಮ್ ನಾರಾಯಣ್. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕ ಸೌಂದರ್ಯ ಜಗದೀಶ್. (ಏಜೆನ್ಸೀಸ್)

  English summary
  Actress Nikita Thukral to do an item number in 'Snehitaru' (Friends). Challenging star Darshan was roped in to play a special role in the new movie Snehitaru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X