ಭಲೆ, ರೈಲ್ವೆ ಸ್ಟೇಷನ್‌ನಲ್ಲೇ ಅಶ್ಲೀಲ ಸಿನಿಮಾ ಪ್ರದರ್ಶನ!

By Rajendra

Obscene Film Shown in railway station
ರೈಲ್ವೆ ಸ್ಟೇಷನ್‌ ಟಿವಿ ಪರದೆ ಮೇಲೆ ಅಶ್ಲೀಯ ಸಿನಿಮಾ ಪ್ರದರ್ಶಿಸುತ್ತಿದ್ದ ಆಸಾಮಿಯೊಬ್ಬನನ್ನು ರೈಲ್ವೆ ಭದ್ರತಾ ದಳ (ಆರ್‌ಪಿಎಫ್) ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಒರಿಸ್ಸಾದ ಭುವನೇಶ್ವರ ರೈಲ್ವೆ ಸ್ಟೇಷನ್‌ನಲ್ಲಿ. ರೈಲ್ವೆ ಸ್ಟೇಷನ್‌ನಲ್ಲಿದ್ದ ಟಿವಿ ಸೆಟ್‌ನಲ್ಲಿ ಈ ವ್ಯಕ್ತಿ ಅಶ್ಲೀಲ ಸಿನಿಮಾವನ್ನು ಸುಮಾರು 10 ನಿಮಿಷಗಳ ಕಾಲ ಪ್ರದರ್ಶಿಸಿದ್ದಾನೆ.

ಬಂಧಿತನ ಹೆಸರು ಅಶುತೋಶ್ ಸ್ವೈನ್. ಈತ ಖಾಸಗಿ ಕಂಪನಿಯೊಂದರಲ್ಲಿದ್ದು ಟಿವಿ ಸೆಟ್‌ಗಳನ್ನು ಆಪರೇಟ್ ಮಾಡುವ ಕೆಲಸ ಮಾಡುತ್ತಿದ್ದ. ಟಿವಿ ರಿಪೇರಿಯಲ್ಲಿ ನಿಷ್ಣಾತನಾದ ಈತ ತನ್ನ ಮೊಬೈಲ್ ಫೋನ್‌ನಲ್ಲಿದ್ದ ಅಶ್ಲೀಲ ಸಿನಿಮಾವನ್ನು ರೈಲ್ವೆ ಟೆಲಿವಿಷನ್ ಸರ್ವರ್‌‌ಗೆ ಅಪ್‌ಲೋಡ್ ಮಾಡಿ ಟಿವಿ ಪರದೆಯಲ್ಲಿ ಮೂಡಿ ಬರುವಂತೆ ಮಾಡಿದ್ದ.

ಈತನ ಕೈಚಳಕವೇನೋ ಚೆನ್ನಾಗಿತ್ತು. ಆದರೆ ಪೊಲೀಸರು ಈಗ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಈತ ಈಗ ಪೊಲೀಸರ ಅತಿಥಿ. ಈ ಸಂಬಂಧ ರೈಲ್ವೆ ಇಲಾಖೆ ತನಿಖೆ ನಡೆಸುವಂತೆ ಸೂಚಿಸಿದೆ. ಖಾಸಗಿ ಸಂಸ್ಥೆಯೊಂದು ಈ ಟೆಲಿವಿಷನ್ ಸೇವೆಯನ್ನು ನೀಡುತ್ತಿದ್ದು ಕಂಟ್ರೋಲ್ ರೂಮನ್ನು ಸೀಲ್ ಮಾಡುವಂತೆ ಸೂಚಿಸಲಾಗಿದೆ. (ಏಜೆನ್ಸೀಸ್)

More from Filmibeat

English summary
Railway Protection Force (RPF) arrested a person who allegedly showed an obscene film on the television set in Bhubaneswar railway station in Orissa. According to sources, the film was telecasted in all television sets in the railway station continuously for 10 minutes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X