»   » ಪಾನ್ ವಾಲ ಒಂದು ವಿಭಿನ್ನ ಚಿತ್ರ:ಮಹೇಶ್ ಬಾಬು

ಪಾನ್ ವಾಲ ಒಂದು ವಿಭಿನ್ನ ಚಿತ್ರ:ಮಹೇಶ್ ಬಾಬು

Subscribe to Filmibeat Kannada
Shivraj Kumar
ಹ್ಯಾಟ್ರಿಕ್‌ಹೀರೋ ಶಿವರಾಜಕುಮಾರ್ ಮೋಹಕಬೆಡಗಿ ಸುರ್ವಿನ್‌ಚಾವ್ಲಾ ಅಭಿನಯದ, 'ಅಂತೂ ಇಂತು ಪ್ರೀತಿ ಬಂತು' ಚಿತ್ರದ ನಾಯಕ ಆದಿತ್ಯಬಾಬು ನಿರ್ಮಾಣದ 'ಪರಮೇಶ ಪಾನ್‌ವಾಲ' ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದೆ.

ಪಾನ್ ಮಾರುವ ಪರಮೇಶ ಸಹೃದಯಿ ಸಹೋದರನೂ ಹೌದು. ಅಣ್ಣ ತಂಗಿಯ ಬಾಂಧವ್ಯದ ಸನ್ನಿವೇಶ ಹಾಗೂ ಗೀತೆಗಳು ಚಿತ್ರದಲ್ಲಿ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ನಾನು ನಿರ್ದೇಶಿಸಿರುವ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ಉತ್ತಮವಾಗಿದ್ದು ನಿರೂಪಣೆ ವಿಭಿನ್ನವಾಗಿದೆ ಎಂಬ ಅಭಿಪ್ರಾಯ ನಿರ್ದೇಶಕ ಮಹೇಶ್‌ಬಾಬು ಅವರದು. ಸದ್ಯದಲ್ಲೇ ಸೆನ್ಸಾರ್ ಮುಂದೆ ಬರುವ ಪರಮೇಶ ಮುಂದಿನ ತಿಂಗಳು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆಯಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಲಕ್ಷ್ಮೀ ಅವರು ಅರ್ಪಿಸಿ ಆದಿತ್ಯ ಆರ್ಟ್ ಎಂ.ಅಲ್.ಸಿ ಲಾಂಛನದಲ್ಲಿ ಆದಿತ್ಯಬಾಬು ನಿರ್ಮಿಸಿರುವ 'ಪರಮೇಶ ಪಾನ್‌ವಾಲ' ಚಿತ್ರವನ್ನು ಮಹೇಶ್‌ಬಾಬು ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವೀನಸ್‌ಮೂರ್ತಿ ಛಾಯಾಗ್ರಹಣ, ಜನಾರ್ಧನ ಮಹರ್ಷಿ ಕಥೆ, ಹರಿಕೃಷ್ಣ ಸಂಗೀತ, ರವಿವರ್ಮ ಸಾಹಸ, ಚಂಪಕಧಾಮ ಬಾಬು ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸುರ್ವೀನ್‌ಚಾವ್ಲಾ, ಶ್ರೀನಿವಾಸಮೂರ್ತಿ, ಆಶೀಷ್‌ವಿಧ್ಯಾರ್ಥಿ, ಚಾರುಲತಾ, ಚಿತ್ರಾಶೆಣೈ, ಅಕುಲ್‌ಬಾಲಾಜಿ, ಸೋನು, ರೇಖಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)


ಪರಮೇಶ ಪಾನ್ ವಾಲ ಧ್ವನಿಸುರಳಿ ಬಿಡುಗಡೆ | ಸುರ್ವೀನ್ ಚಾವ್ಲಾ ಗ್ಯಾಲರಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada