ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದ ಅಪರೂಪದ ಚಿತ್ರ ಸಂಸ್ಕಾರ

ಕನ್ನಡಕ್ಕೆ ಮೊಟ್ಟಮೊದಲ ಸ್ವರ್ಣ ಕಮಲ ಗಳಿಸಿಕೊಟ್ಟ ಚಿತ್ರ. ಕನ್ನಡ ಚಿತ್ರ ಪರಂಪರೆಯ ಇತಿಹಾಸಕಾರರು 1970ರಲ್ಲಿ ಹೊಸ ಅಲೆ ಆರಂಭವಾಯಿತು ಎಂದು ದಾಖಲಿಸುತ್ತಾರೆ. ಈ ಹೊಸ ಅಲೆಗೆ ಸೇರಿದ ಚಿತ್ರ ಶೈಲಿಗಳ ಪರಂಪರೆಗೆ 'ಸಂಸ್ಕಾರ' ನಾಂದಿ ಹಾಡಿತೆಂದು ಹೇಳುತ್ತಾರೆ.
'ಸಂಸ್ಕಾರ' ಚಿತ್ರ ಒಂದು ಸಾವಿನ ಘಟನೆಯಿಂದ ಆರಂಭವಾಗುತ್ತದೆ. ಅದು ಅತಿಂಥ ಸಾವಲ್ಲ. ನಾರಣಪ್ಪನ ಸಾವು ಇಡೀ ಊರಿಗೆ ದೊಡ್ಡ ಸಮಸ್ಯೆಯಾಗಿ ನಿಂತಿದೆ. ಬದುಕಿದ್ದಾಗ ಊರ ಜನರಿಗೆ ಸಮಸ್ಯೆಯಾಗಿದ್ದ ಆತ ಸತ್ತ ನಂತರವೂ ಪ್ರಶ್ನೆಯಾಗಿ ಕಾಡುತ್ತಾನೆ.
ದೂರ್ವಾಸಪುರ ಎಂಬ ಸಂಪ್ರದಾಯಸ್ಥ ಬ್ರಾಹ್ಮಣರ ಅಗ್ರಹಾರದಲ್ಲಿ ಬ್ರಾಹ್ಮಣನಾಗಿಯೇ ಹುಟ್ಟಿದ ಆತ ದುರ್ವ್ಯಸನಿ. ಊರಿನವರು ಪರಿಭಾವಿಸಿದ್ದ ಶ್ರೇಷ್ಠಮೌಲ್ಯಗಳನ್ನು ಧಿಕ್ಕರಿಸಿದ ಬಂಡಾಯಗಾರ. ಹೆಂಡ ಕುಡಿದವನು, ಮಾಂಸ ತಿಂದವನು. ಮುಸ್ಲಿಂ ಗೆಳೆಯನ್ನು ಕಟ್ಟಿಕೊಂಡು ದೇವರ ಪವಿತ್ರ ಕೊಳದ ಮೀನುಗಳನ್ನು ಭೇಟೆಯಾಡಿದವನು.
More from Filmibeat
English summary
Samskara is a 1970 film in the Kannada language which is based on a novel of the same name, written by the renowned writer and Jnanpith award winner, U. R. Ananthamurthy. The film is said to have been a path-breaking venture and is supposed to have pioneered the parallel cinema movement in Kannada.
ಯು ಆರ್ ಅನಂತಮೂರ್ತಿ ಗಿರೀಶ್ ಕಾರ್ನಾಡ್ ಪಿ ಲಂಕೇಶ್ ಸಂಸ್ಕಾರ girish karnad ur ananthamurthy p lankesh samskara


Click it and Unblock the Notifications











