twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದ ಅಪರೂಪದ ಚಿತ್ರ ಸಂಸ್ಕಾರ

    By Rajendra
    |
    <ul id="pagination-digg"><li class="next"><a href="/news/17-samskara-dvd-by-total-kannada-aid0052.html">Next »</a></li></ul>

    Samskara movie still
    ವ್ಯಾಪಾರಿ ಚಿತ್ರದ ಯಾವೊಂದು ಅಂಶವನ್ನೂ ಸೇರಿಸದೆ, ಸಂಪೂರ್ಣ ಹೊಸಬರಿಂದಲೇ ತಯಾರಾದ 'ಸಂಸ್ಕಾರ' ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಅಪರೂಪದ ಚಿತ್ರ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರಗಳನ್ನು ಬೇಟೆಯಾಡಿದ ಮೊದಲ ಚಿತ್ರ 'ಸಂಸ್ಕಾರ'. ಈಗ 'ಸಂಸ್ಕಾರ' ಡಿವಿಡಿ ರೂಪದಲ್ಲಿ ಲಭ್ಯ.

    ಕನ್ನಡಕ್ಕೆ ಮೊಟ್ಟಮೊದಲ ಸ್ವರ್ಣ ಕಮಲ ಗಳಿಸಿಕೊಟ್ಟ ಚಿತ್ರ. ಕನ್ನಡ ಚಿತ್ರ ಪರಂಪರೆಯ ಇತಿಹಾಸಕಾರರು 1970ರಲ್ಲಿ ಹೊಸ ಅಲೆ ಆರಂಭವಾಯಿತು ಎಂದು ದಾಖಲಿಸುತ್ತಾರೆ. ಈ ಹೊಸ ಅಲೆಗೆ ಸೇರಿದ ಚಿತ್ರ ಶೈಲಿಗಳ ಪರಂಪರೆಗೆ 'ಸಂಸ್ಕಾರ' ನಾಂದಿ ಹಾಡಿತೆಂದು ಹೇಳುತ್ತಾರೆ.

    'ಸಂಸ್ಕಾರ' ಚಿತ್ರ ಒಂದು ಸಾವಿನ ಘಟನೆಯಿಂದ ಆರಂಭವಾಗುತ್ತದೆ. ಅದು ಅತಿಂಥ ಸಾವಲ್ಲ. ನಾರಣಪ್ಪನ ಸಾವು ಇಡೀ ಊರಿಗೆ ದೊಡ್ಡ ಸಮಸ್ಯೆಯಾಗಿ ನಿಂತಿದೆ. ಬದುಕಿದ್ದಾಗ ಊರ ಜನರಿಗೆ ಸಮಸ್ಯೆಯಾಗಿದ್ದ ಆತ ಸತ್ತ ನಂತರವೂ ಪ್ರಶ್ನೆಯಾಗಿ ಕಾಡುತ್ತಾನೆ.

    ದೂರ್ವಾಸಪುರ ಎಂಬ ಸಂಪ್ರದಾಯಸ್ಥ ಬ್ರಾಹ್ಮಣರ ಅಗ್ರಹಾರದಲ್ಲಿ ಬ್ರಾಹ್ಮಣನಾಗಿಯೇ ಹುಟ್ಟಿದ ಆತ ದುರ್ವ್ಯಸನಿ. ಊರಿನವರು ಪರಿಭಾವಿಸಿದ್ದ ಶ್ರೇಷ್ಠಮೌಲ್ಯಗಳನ್ನು ಧಿಕ್ಕರಿಸಿದ ಬಂಡಾಯಗಾರ. ಹೆಂಡ ಕುಡಿದವನು, ಮಾಂಸ ತಿಂದವನು. ಮುಸ್ಲಿಂ ಗೆಳೆಯನ್ನು ಕಟ್ಟಿಕೊಂಡು ದೇವರ ಪವಿತ್ರ ಕೊಳದ ಮೀನುಗಳನ್ನು ಭೇಟೆಯಾಡಿದವನು.

    <ul id="pagination-digg"><li class="next"><a href="/news/17-samskara-dvd-by-total-kannada-aid0052.html">Next »</a></li></ul>

    English summary
    Samskara is a 1970 film in the Kannada language which is based on a novel of the same name, written by the renowned writer and Jnanpith award winner, U. R. Ananthamurthy. The film is said to have been a path-breaking venture and is supposed to have pioneered the parallel cinema movement in Kannada.
    Thursday, November 17, 2011, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X