For Quick Alerts
  ALLOW NOTIFICATIONS  
  For Daily Alerts

  ಅತಿ ಶೀಘ್ರದಲ್ಲೇ ತಾರೆ ಪೂಜಾಗಾಂಧಿ ಕಲ್ಯಾಣಮಸ್ತು

  By Rajendra
  |

  ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ ಕನ್ನಡದ ಹುಡುಗನ ಕೈಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅವರ ಮದುವೆ ಯಾವಾಗ ಎಂದು ಕೇಳಿದಿರಾ?ಆದರೆ ಇದು ಪೂಜಾಗಾಂಧಿ ಮದುವೆ ಸುದ್ದಿ ಅಲ್ಲ ಬಿಡಿ. ಹಾಗಂತ ನಿರಾಶರಾಗಬೇಡಿ. ಇದು ಪೂಜಾಗಾಂಧಿ 'ಕಲ್ಯಾಣಮಸ್ತು' ಚಿತ್ರಕ್ಕೆ ಸಂಬಂಧಿಸಿದ ಸುದ್ದಿ.

  ಸುದೀರ್ಘ ಸಮಯದಿಂದ ರೀಲು ಸುತ್ತುತ್ತಲೇ ಇದ್ದ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಬೆಂಗಳೂರಿನ ಪ್ರಸಾದ್ ಸ್ಟುಡಿಯೋದಲ್ಲಿ ಮಾತಿನ ಧ್ವನಿಮುದ್ರಣ ನಡೆಯಿತು. ಶೀಘ್ರದಲ್ಲೇ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ದೇಶಕ ಬಿ.ಮಲ್ಲೇಶ್ ತಿಳಿಸಿದ್ದಾರೆ. ಈ ಚಿತ್ರದ ನಾಯಕ ನಟ 'ಪಟ್ರೆ' ಖ್ಯಾತಿಯ ಅಜಿತ್.

  ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಕಾಲೇಜು ಕ್ಯಾಂಪಸ್ಸು, ಪ್ರೀತಿ ಪ್ರೇಮ ಪ್ರಣಯ ಎಲ್ಲವೂ ಇದೆ. ಅಷ್ಟೇ ಅಲ್ಲದೆ ತಾಯಿ, ತಂಗಿ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆಯಂತೆ. ಚೆನ್ನೈ ಮೂಲದ ಭರತ್ ಸಂಗೀತ ಚಿತ್ರಕ್ಕಿದೆ. ರವಿ ಪ್ರಕಾಶ್, ಅನಂತನಾಗ್, ಸಿತಾರ, ಅವಿನಾಶ್, ಮಾಳವಿಕಾ, ಉಮಾಶ್ರೀ ಸೇರಿದಂತೆ ಹಲವು ತಾರಾಬಳಗ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

  English summary
  Actress Pooja Gandhi lead Kannada film Kalyanamastu ready to be released. The film has been written and directed by B.Mallesh. Anant Nag, Avinash, Umashri, Malavika are in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X